ಪಟನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ6 ತಿಂಗಳಲ್ಲೇ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 

ಇದೇ ವರ್ಷದ ಮೇ 12ರಂದು ತೇಜ್‌ ಪ್ರತಾಪ್‌ ಅವರು, ಆರ್‌ಜೆಡಿ ಮುಖಂಡ ಚಂದ್ರಿಕಾ ರೈ ಅವರ ಪುತ್ರಿ ಐಶ್ವರ್ಯ ರಾಯ್‌ ಅವರನ್ನು ವರಿಸಿದ್ದರು. ಆದರೆ, ಇದೀಗ ತೇಜ್‌ ಪ್ರತಾಪ್‌ ಪಟನಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಆದರೆ, ಈ ವಿಚ್ಛೇದನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. 

ಬಿಹಾರದ ಮಾಜಿ ಸಿಎಂ ಆಗಿರುವ ದರೋಗಾ ಪ್ರಸಾದ್‌ ರೈ ಅವರ ಮೊಮ್ಮಗಳಾಗಿದ್ದ ಐಶ್ವರ್ಯ ರೈ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿ ಟಿಕೆಟ್‌ನಿಂದ ಕಣಕ್ಕಿಳಿಯುತ್ತಾರೆ ಎಂಬ ವರದಿಗಳ ಬೆನ್ನಲ್ಲೇ, ವಿಚ್ಛೇದನದ ಸುದ್ದಿ ಹೊರಬಿದ್ದಿದೆ.