ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್'ಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಕೇಂದ್ರ ವಾಪಸ್ ಪಡೆದಿದೆ. ಇದರ ಬದಲಾಗಿ ಅವರಿಗೆ ಝಡ್ ಶ್ರೇಣಿಯ ಭದ್ರತೆಯನ್ನು ನೀಡಲಾಗುತ್ತಿದೆ. ಎನ್'ಎಸ್'ಜಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿದ್ದು, ಸಿಆರ್'ಪಿಎಫ್ ಸಿಬ್ಬಂದಿ ಲಾಲೂ ರಕ್ಷಣೆಗೆ ಇರಲಿದ್ದಾರೆ.
ಹೊಸದಿಲ್ಲಿ(ನ.27): ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್'ಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಕೇಂದ್ರ ವಾಪಸ್ ಪಡೆದಿದೆ. ಇದರ ಬದಲಾಗಿ ಅವರಿಗೆ ಝಡ್ ಶ್ರೇಣಿಯ ಭದ್ರತೆಯನ್ನು ನೀಡಲಾಗುತ್ತಿದೆ. ಎನ್'ಎಸ್'ಜಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿದ್ದು, ಸಿಆರ್'ಪಿಎಫ್ ಸಿಬ್ಬಂದಿ ಲಾಲೂ ರಕ್ಷಣೆಗೆ ಇರಲಿದ್ದಾರೆ. ಝಡ್ ಶ್ರೇಣಿಯ ಭದ್ರತೆಯಲ್ಲಿ ರಾಜ್ಯ ಪೊಲೀಸ್ ಅಧಿಕಾರಿಗಳೂ ಕೂಡ ಇರಲಿದ್ದಾರೆ.
ಕೇಂದ್ರದ ಈ ನಿರ್ಧಾರಕ್ಕೆ ಲಾಲೂ ಪುತ್ರ ಹಾಗೂ ಬಿಹಾರದ ಸಚಿವರಾಗಿರುವ ತೇಜ್ ಪ್ರತಾಪ್'ರಿಂದ ಅಸಮಾಧಾನ ವ್ಯಕ್ತವಾಗಿದೆ. ಮುಂದೆ ಲಾಲು ಪ್ರಸಾದ್ ಅವರಿಗೆ ಯಾವುದೇ ಸಮಸ್ಯೆಯಾದರೂ ಅದಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರಣರಾಗಲಿದ್ದಾರೆ ಎಂದಿದ್ದಾರೆ. ತಮ್ಮ ತಂದೆಯ ವಿರುದ್ಧದ ಇದೊಂದು ಪಿತೂರಿ ಎಂದು ತೇಜ್ ಪ್ರತಾಪ್ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಜಿತನ್ ರಾಂ ಮಾಂಜಿ ಅವರಿಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನೂ ಕೂಡ ಕೇಂದ್ರದಿಂದ ವಾಪಸ್ ಪಡೆದುಕೊಳ್ಳಲಾಗಿದೆ. ಅದರ ಬದಲಿಗೆ ಅವರಿಗೆ ಸಿಆರ್'ಪಿಎಫ್'ಭದ್ರತೆ ಒದಗಿಸಲಾಗಿದೆ.
