ಮೇವು ಹಗರಣದಲ್ಲಿ ದೋಷಿಯಾಗಿ ರಾಂಚಿ ಜೈಲಿನಲ್ಲಿ ಬಂಧಿತರಾಗಿರುವ ಆರ್‌'ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಜೈಲಿನೊಳಗೆ ಕೈದಿಯಂತಿಲ್ಲ. ಕೈದಿ ಎಂಬ ಹಣೆಪಟ್ಟಿಯೊಂದು ಬಿಟ್ಟರೆ, ಬಿಹಾರ ಮಾಜಿ ಸಿಎಂ ಉಳಿದಂತೆ ಜೈಲಿನಲ್ಲಿ ರಾಜ ಮರ್ಯಾದೆ ಪಡೆಯುತ್ತಿದ್ದಾರೆ.
ರಾಂಚಿ (ಡಿ.29): ಮೇವು ಹಗರಣದಲ್ಲಿ ದೋಷಿಯಾಗಿ ರಾಂಚಿ ಜೈಲಿನಲ್ಲಿ ಬಂಧಿತರಾಗಿರುವ ಆರ್'ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಜೈಲಿನೊಳಗೆ ಕೈದಿಯಂತಿಲ್ಲ. ಕೈದಿ ಎಂಬ ಹಣೆಪಟ್ಟಿಯೊಂದು ಬಿಟ್ಟರೆ, ಬಿಹಾರ ಮಾಜಿ ಸಿಎಂ ಉಳಿದಂತೆ ಜೈಲಿನಲ್ಲಿ ರಾಜ ಮರ್ಯಾದೆ ಪಡೆಯುತ್ತಿದ್ದಾರೆ.
ಜೈಲಿನಲ್ಲಿ ಲಾಲು ತಮ್ಮ ವಿರಾಮ ಅವಧಿಯನ್ನು ಜೈಲಿನ ಮೇಲಿನ ವಿಭಾಗದಲ್ಲಿ ಕಳೆಯುತ್ತಾರೆ. ಅಲ್ಲದೆ, ಅದೇ ಜೈಲಿನಲ್ಲಿರುವ ಕೆಲವು ಸಹ ರಾಜಕಾರಣಿಗಳ ಜೊತೆ ಚರ್ಚೆ ಯನ್ನೂ ಮಾಡುತ್ತಾರೆ. ವಿವಿಧ ಪ್ರಕರಣಗಳಲ್ಲಿ ಜೈಲು ಪಾಲಾಗಿರುವ ಮಾಜಿ ಸಂಸದ ಆರ್.ಕೆ. ರಾಣಾ, ಜಗದೀಶ್ ಶರ್ಮಾ, ಸಾವ್ನಾ ಲಕ್ರಾ, ರಾಜಾ ಪೀಟರ್ ಮತ್ತು ಕಮಲ್ ಕಿಶೋರ್ ಭಗತ್ ಮುಂತಾದ ರಾಜಕಾರಣಿಗಳು ಲಾಲು ಜೊತೆ ಹರಟೆಗೆ ನೆರೆಯುತ್ತಾರೆ. ಮನೆಯಿಂದಲೇ ಅವರ ನೆಚ್ಚಿನ ಆಹಾರಗಳು ಜೈಲಿಗೆ ರವಾನೆಯಾಗುತ್ತವೆ. ಮೇಲಿನ ವಿಭಾಗದ ಲಾಲು ಕೋಣೆಯ ಸಮೀ ಪವೇ ಅಡುಗೆ ಕೋಣೆಯಿರುವುದರಿಂದ, ದಿನವಿಡೀ ಚಹಾ ಮತ್ತು ತಿಂಡಿ ಸರಬರಾಜಾಗುತ್ತಿರುತ್ತದೆ.ಟೀವಿ ಸಹ ವೀಕ್ಷಿಸುತ್ತಾರೆ ಲಾಲು ಪ್ರಸಾದ್ ಯಾದವ್.
