ಪಾಟ್ನಾ :  ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಸೊಸೆ ಐಶ್ವರ್ಯ ರೈ ರಾಜಕೀಯ ಪಾದಾರ್ಪಣೆ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಸುಳಿವನ್ನು ನೀಡಲಾಗಿದೆ. 

 ಪಕ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಡಲಾದ ಪೋಸ್ಟರ್ ನಲ್ಲಿ ಐಶ್ವರ್ಯ ರೈ ಫೊಟೊ  ಹಾಕಲಾಗಿದ್ದು ಈ ಮೂಲಕ ಸುಳಿವೊಂದನ್ನು ಹೊರ ಹಾಕಿದ್ದಾರೆ. 

ಲಾಲೂ ಪ್ರಸಾದ್ ಯಾದವ್ ಕುಟುಂಬ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು, ಕಳೆದ ಮೇ 12 ರಂದು ಲಾಲೂ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯ ರೈ ಅವರ ಕೈ ಹಿಡಿದಿದ್ದರು. 

ಲೋಕಸಭಾ ಚುನಾವಣೆ ಇನ್ನೇನು ಸಮೀಪಿಸುತ್ತಿದ್ದು, ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.