ಸದಾ ಒಂದಿಲ್ಲೊಂದು ಕಾರಣಕ್ಕೆ ಕಿತ್ತಾಡುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಬಾಬಾ ರಾಮ್ ದೇವ್ ಇನ್ಮುಂದೆ ಬಂಧುಗಳಾಗಲಿದ್ದಾರೆ! ಹೀಗೊಂದು ಸುದ್ಧಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಪಾಟ್ನಾ (ನ.09): ಸದಾ ಒಂದಿಲ್ಲೊಂದು ಕಾರಣಕ್ಕೆ ಕಿತ್ತಾಡುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಬಾಬಾ ರಾಮ್ ದೇವ್ ಇನ್ಮುಂದೆ ಬಂಧುಗಳಾಗಲಿದ್ದಾರೆ! ಹೀಗೊಂದು ಸುದ್ಧಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

Add Asianetnews Kannada as a Preferred SourcegooglePreferred

ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ, ರಾಜ್ಯದ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಅವರಿಗೆ ರಾಮ್ ದೇವ್ ಸೋದರನ ಪುತ್ರಿಯನ್ನು ಕೊಟ್ಟು ಮದುವೆ ಮಾಡಬೇಕು ಎನ್ನುವ ಮಾತುಕತೆ ನಡೆಯುತ್ತಿದೆ.

ಮದುವೆ ವಿಷಯದಲ್ಲಿ ರಾಮ್ ದೇವ್ ಹೆಚ್ಚು ಮುತುವರ್ಜಿ ವಹಿಸಿದ್ದು, ಲಾಲೂ ಅವರೂ ಉತ್ಸುಕರಾಗಿದ್ದಾರೆ. ಕುಟುಂಬಗಳ ನಡುವೆ ಮಾತುಕತೆ ನಡೆಯುತ್ತಿದ್ದು ವರ್ಷದೊಳಗೆ ಮದುವೆ ನಡೆಯಬಹುದೆಂಬ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.