ಲಾಲುಗೆ ಮತ್ತೆ ಮುಖಭಂಗ; 14 ವರ್ಷ ಜೈಲೇ ಗತಿ

First Published 24, Mar 2018, 2:43 PM IST
Lalu Prasad gets 14 year jail term  slapped with Rs 60 lakh fine in fourth fodder scam case
Highlights

ಮೇವು ಹಗರಣದ ನಾಲ್ಕನೇ ಪ್ರಕರಣದ ಶಿಕ್ಷೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಪಡಿಸಿದ್ದು ಲಾಲು ಪ್ರಸಾದ್ ಯಾದವ್’ಗೆ ಮತ್ತೆ 7 ವರ್ಷ ಜೈಲು ಶಿಕ್ಷೆಯಾಗಿದೆ. 

ರಾಂಚಿ (ಮಾ. 24): ಮೇವು ಹಗರಣದ ನಾಲ್ಕನೇ ಪ್ರಕರಣದ ಶಿಕ್ಷೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಪಡಿಸಿದ್ದು ಲಾಲು ಪ್ರಸಾದ್ ಯಾದವ್’ಗೆ ಮತ್ತೆ 7 ವರ್ಷ ಜೈಲು ಶಿಕ್ಷೆಯಾಗಿದೆ. 

ಈಗಾಗಲೇ ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಯಾದವ್’ಗೆ ನಾಲ್ಕನೇ ಪ್ರಕರಣದಲ್ಲೂ ಹಿನ್ನಡೆಯಾಗಿದೆ. 7 ವರ್ಷ ಜೈಲು ಶಿಕ್ಷೆ ಹಾಗೂ 30 ಲಕ್ಷ ದಂಡ ವಿಧಿಸಲಾಗಿದೆ. 
7 ವರ್ಷ ಜೈಲು ಶಿಕ್ಷೆಯನ್ನು ಪ್ರತ್ಯೇಕವಾಗಿ ಅನುಭವಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಅಂದರೆ ಈಗಾಗಲೇ 7 ವರ್ಷ ವಿಧಿಸಲಾಗಿರುವ ಶಿಕ್ಷೆ ಪೂರೈಸಿ ಬಳಿಕ ಮತ್ತೆ 7 ವರ್ಷ ಅನುಭವಿಸಬೇಕು. ಅಂದರೆ ಒಟ್ಟು 14 ವರ್ಷ ಜೈಲಿನಲ್ಲೇ ಕಳೆಯಬೇಕಾಗುತ್ತದೆ. ಬೇರೆ ಬೇರೆ ಪ್ರಕರಣದಲ್ಲಿ ಒಟ್ಟು 60 ಲಕ್ಷ ದಂಡವನ್ನು ಪಾವತಿಸಬೇಕಾಗಿದೆ. 

ಸಿಬಿಐ ವಿಶೇಷ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಾಗಿ ಲಾಲು ಪರ ವಕೀಲರು ಹೇಳಿದ್ದಾರೆ. 
 

loader