ಬೆಂಗಳೂರು [ಆ.24]:   ಯಡಿಯೂರಪ್ಪ ಎದುರೇ ಅಸಮಾಧಾನಿತ ನಾಯಕ ಉಮೇಶ್ ಕತ್ತಿ,  ಸಚಿವ ಲಕ್ಷ್ಮಣ್ ಸವದಿ ನಡುವೆ ಜಟಾಪಟಿ ನಡೆದಿದೆ. ಪರಸ್ಪರ ಜೋರು ಮಾತುಗಳಿಂದ ಸವದಿ ಮತ್ತು ಕತ್ತಿ  ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.  

ನಿಮಗೆ ಸಚಿವ ಸ್ಥಾನ ತಪ್ಪಿರುವುದಕ್ಕೆ ನನಗೆ ಸಂಬಂಧವಿಲ್ಲ. ಹೈಕಮಾಂಡ್ ನನ್ನ ಕೆಲಸ ಗುರುತಿಸಿ ಮಂತ್ರಿ ಮಾಡಿದೆ. ನನ್ನ ವಿಚಾರಕ್ಕೆ ನಿವ್ಯಾಕೆ ಬರ್ತೀರ ಎಂದು ಕತ್ತಿಗೆ ಸವದಿ ಪ್ರಶ್ನೆ ಮಾಡಿದರು.  

ಸವದಿ ಮಾತಿಂದ ಕೋಪಗೊಂಡ ಉಮೇಶ್ ಕತ್ತಿ, ಎಲ್ಲಾ ನಿನ್ನಿಂದಲೇ ಆಗಿರುವುದು, ಹೈಕಮಾಂಡ್ ನಲ್ಲಿ ಲಾಬಿ ಮಾಡಿ ಸಚಿವ ಸ್ಥಾನ ಗಿಟ್ಟಿಸಿದ್ದೀಯ. ನಿನ್ನ ಹಾಗೆ ಇನ್ನೊಬ್ಬರ ಶಿಫಾರಸ್ಸಿನ ಮಂತ್ರಿಗಿರಿ ನಾನು ಕೇಳುವುದಿಲ್ಲ ಎಂದು ಸವದಿಗೆ ಸಿಟ್ಟಿನಲ್ಲಿ ಉತ್ತರಿಸಿದ್ದಾರೆ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಬ್ಬರ ನಡುವೆ ಜಟಾಪಟಿ ನಡೆದ ಬಳಿ ಸಿಎಂ ಯಡಿಯೂರಪ್ಪ ಮನೆಯಿಂದ ಗರಂ ಆಗಿ ಉಮೇಶ್ ಕತ್ತಿ ಹೊರ ಬಂದರು. ಇನ್ನು ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲೂ ಕತ್ತಿ ನಿರಾಕರಿಸಿದ್ದು, ತಾವು ಮಾಧ್ಯಮಗಳಿಂದ ದೂರ ಉಳಿದಿದ್ದಾಗಿ ಹೇಳಿದರು.  

ಇನ್ನು ಕತ್ತಿ ಹೊರ ನಡೆಯುತ್ತಿದ್ದಂತೆ ಲಕ್ಷ್ಮಣ್ ಸವದಿ ಹಾಗೂ ಕುಡಚಿ‌ ಶಾಸಕ ರಾಜೀವ್ ಕೂಡ ಸಿಎಂ ಮನೆಯಿಂದ ನಿರ್ಗಮಿಸಿದರು. ಈ ವೇಳೆ ಸವದಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಅಸಮಾನದ ಬಗ್ಗೆ ಯಾವುದೇ ಮಾತು ಕತೆ ನಡೆಸಿಲ್ಲ ಎಂದರು.