ಬೆಂಗಳೂರು(ನ.3): ಬೃಹತ್ ಬೆಂಗಳೂರು ಪಾಲಿಕೆಯ ಲಕ್ಕಸಂಧ್ರ ವಾರ್ಡ್'ನ ಉಪ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಫಿಕ್ಸ್ ಮಾಡಿದೆ. ನ.2ರಂದು ಆಯುಕ್ತರು ಚುನಾವಣೆ ಅಧಿಸೂಚನೆ ಹೊರಡಿಸಿದ್ದು, ನವೆಂಬರ್ 9 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನ. 20ರಂದು ಮತದಾನ ನಡೆಯಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ. ಲಕ್ಕಸಂದ್ರ ವಾರ್ಡ್ ಕಾರ್ಪೋರೇಟರ್ ಮಹೇಶ್ ಬಾಬು ಕಳೆದ ಜುನ್'ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಕಾರಣ ಅವರ ಸ್ಥಾನ ತೆರವಾಗಿತ್ತು.