ಜೋರಾಗಿದೆ ಚುನಾವಣಾ ಕಾವು; ಸತೀಶ್ ಜಾರಕಿಹೊಳಿ ವಿರುದ್ಧ ತೊಡೆ ತಟ್ಟಿದ್ದಾರೆ ಲಖನ್ ಜಾರಕಿಹೊಳಿ

First Published 15, Mar 2018, 1:25 PM IST
Lakhan Jarakiholi Contest from BJP against Satish Jarakiholi
Highlights

ಯಮಕನಮರಡಿ ಕ್ಷೇತ್ರದಲ್ಲಿ  ಸಹೋದರರ ಸವಾಲ್ ಜೋರಾಗಿದೆ.  ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ  ಸ್ಪರ್ಧಿಸಲು ಲಖನ್ ಜಾರಕಿಹೊಳಿ ತೀರ್ಮಾನಿಸಿದ್ದಾರೆ. 

ಬೆಳಗಾವಿ (ಮಾ. 15): ಯಮಕನಮರಡಿ ಕ್ಷೇತ್ರದಲ್ಲಿ  ಸಹೋದರರ ಸವಾಲ್ ಜೋರಾಗಿದೆ.  ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ  ಸ್ಪರ್ಧಿಸಲು ಲಖನ್ ಜಾರಕಿಹೊಳಿ ತೀರ್ಮಾನಿಸಿದ್ದಾರೆ. 

ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು  ಲಖನ್ ಜಾರಕೀಹೊಳಿ ತೀರ್ಮಾನಿಸಿದ್ದಾರೆ.  ಕೈಪಾಳಯ ಬಿಟ್ಟು ಬಿಜೆಪಿಯಿಂದ ಸ್ಪರ್ಧೆಗೆ ಮುಂದಾಗಿದ್ದಾರೆ ಲಖನ್ ಜಾರಕಿಹೊಳಿ. ಶೀಘ್ರದಲ್ಲೇ ಲಖನ್ ಜಾರಕೀಹೊಳಿ  ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ.  ಬಿಜೆಪಿ ಸೇರ್ಪಡೆಗೆ ಮುಂದಾಗುವ ಮೂಲಕ ಸಹೋದರನ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ. 

ಸೂಕ್ತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದ ಲಖನ್ ಜಾರಕಿಹೊಳಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.  ರಾಷ್ಟ್ರೀಯ ನಾಯಕರು ನಿಗದಿ ಪಡಿಸಿದ ದಿನಾಂಕದಂದು ಬಿಜೆಪಿಗೆ ಅಧಿಕೃತ ಸೇರ್ಪಡೆಯಾಗಲಿದ್ದಾರೆ.  ಸತೀಶ್ ಜಾರಕಿಹೊಳಿ ವಿರುದ್ಧ ಸಹೋದರನ ಸ್ಪರ್ಧೆಗೆ ವೇದಿಕೆ ಸಿದ್ಧಗೊಂಡಿದೆ. 

loader