ಇದು ಕದ್ದುಮುಚ್ಚಿ ಪ್ರೀತಿ ಮತ್ತು ಕಳ್ಳ ಸಂಸಾರ ನಡೆಸಿದ ಮಹಿಳಾ ಪಿಎಸ್‌'ಐನ ಪ್ರೇಮ್ ಕಹಾನಿ. ವಯಸ್ಸಿನಲ್ಲಿ ತನಗಿಂತ ಕಿರಿಯವನನ್ನು ಲವ್ ಮಾಡಿ ಡೆತ್ ನೋಟ್ ಬರೆದು ಸಾಯಲು ರೆಡಿಯಾಗಿದ್ದಳು. ಆದರೆ ಇದೀಗ ನನಗೆ ನೀನು ಬೇಡ ಎಂದು ದೂರವಾಗಿದ್ದಾಳೆ. ಮೋಸ ಹೋದ ಯುವಕ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾನೆ.

ಶಿವಮೊಗ್ಗ(ಜೂ.01): ಇದು ಕದ್ದುಮುಚ್ಚಿ ಪ್ರೀತಿ ಮತ್ತು ಕಳ್ಳ ಸಂಸಾರ ನಡೆಸಿದ ಮಹಿಳಾ ಪಿಎಸ್‌'ಐನ ಪ್ರೇಮ್ ಕಹಾನಿ. ವಯಸ್ಸಿನಲ್ಲಿ ತನಗಿಂತ ಕಿರಿಯವನನ್ನು ಲವ್ ಮಾಡಿ ಡೆತ್ ನೋಟ್ ಬರೆದು ಸಾಯಲು ರೆಡಿಯಾಗಿದ್ದಳು. ಆದರೆ ಇದೀಗ ನನಗೆ ನೀನು ಬೇಡ ಎಂದು ದೂರವಾಗಿದ್ದಾಳೆ. ಮೋಸ ಹೋದ ಯುವಕ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾನೆ.

ಇದೊಂಥರ ವಿಚಿತ್ರ ಲವ್ ಸ್ಟೋರಿ, ಕಳ್ಳನನ್ನು ಹಿಡಿಯಬೇಕಾದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಲವ್ವಲ್ಲಿ ಬಿದ್ದಳು. ಕದ್ದುಮುಚ್ಚಿ ಪ್ರೀತಿನೂ ಮಾಡಿದಳು. ಪ್ರೀತಿಗಾಗಿ ಸಾಯಲು ರೆಡಿಯಾಗಿದ್ದಳು. ತನಗಿಂತ 4 ವರ್ಷ ಕಿರಿಯವನ ಪ್ರೀತಿಯ ಬಲೆಗೆ ಬಿದ್ದ ವಳು ಈಗ ಮನೆಯವರ ಕಾಟಕ್ಕೆ ಪ್ರೀತಿಸಿದವನನ್ನು ದೂರ ಮಾಡಿದ್ದಾಳೆ. ಭದ್ರಾವತಿಯ ತಾಲೂಕಿನ ಆಗರದಳ್ಳಿಯ ಮಾರುತಿ ಎಂಬಾತನೇ ಈ ಪ್ರೇಮ್ ಕಹಾನಿಯ ಹೀರೋ. ಇನ್ನೂ ಈ ಸ್ಟೋರಿಯಾ ಕಥಾನಾಯಕಿ ಅನ್ನಪೂರ್ಣ, ಹಾವೇರಿಯ ರಟ್ಟೆಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಪಿಎಸ್‌ಐ. ಇವರಿಬ್ಬರ ಕಥೆ ಶುರುವಾಗುವುದು ದಾವಣಗೆರೆಯಲ್ಲಿ.

ಮಾರುತಿ ದಾವಣಗೆರೆಯಲ್ಲಿ ಶೋ ರೂಂ ಮಾಡಲು ಮುಂದಾಗಿದ್ದ. ಇದಕ್ಕೆ ಮರಳಿನ ಅವಶ್ಯಕತೆ ಇತ್ತು. ಈ ಸಂಬಂಧ ರಾಣೆಬೆನ್ನೂರು ಠಾಣೆಯಲ್ಲಿ ಪಿಎಸ್‌'ಐ ಆಗಿದ್ದ ಈ ಅನ್ನಪೂರ್ಣರಿಗೆ ಮರಳು ಕೊಡಿಸುವಂತೆ ಒಂದೆರಡು ಬಾರಿ ಕರೆ ಮಾಡಿದ್ದ. ಬಳಿಕ ಅವರಿಗೆ ವಾಟ್ಸ್'ಅಪ್‌ ಮೆಸೇಜ್ ಕೂಡ ಮಾಡುತ್ತಿದ್ದ.

ಮಾರುತಿಗೆ 28 ತನಗೆ 32 ವರ್ಷ 4 ವರ್ಷ ತನಗಿಂತ ಚಿಕ್ಕವನು ಎಂದು ಗೊತ್ತಾಗಿತ್ತು. ಆದರೂ ಪ್ರೀತಿಯಲ್ಲಿ ಎಲ್ಲವೂ ಕುರುಡು ಎಂಬಂತೆ ಪ್ರೀತಿಸಿದ್ದಳು. ಈ ಮಧ್ಯೆ ವರದಕ್ಷಿಣೆ ರೂಪದಲ್ಲಿ ಹಣ ಕೊಡಲು ಸಿದ್ದರಿದ್ದು, ತನ್ನನ್ನು ಮರೆತು ಬಿಡುವಂತೆ ಯುವಕ ಹೇಳಿದ್ದ. ಕೂಡಲೇ ಅನ್ನಪೂರ್ಣ ಡೆತ್‌ ನೋಟ್ ಬರೆದಿಟ್ಟು, ತನ್ನ ಆಸ್ತಿಯೆಲ್ಲ ತನ್ನ ಗಂಡ ಮಾರುತಿಗೆ ಸೇರಬೇಕು ಎಂದು ಬರೆದಿದ್ದಳು. ಇದರಿಂದ ಮನಸೋತ ಮಾರುತಿಗೆ ಹಣದ ಸಹಾಯ ಮಾಡಿ ಪ್ರೀತಿಯ ಪರಾಕಾಷ್ಠ ಮೆರೆದಿದ್ದಳು. ರಟ್ಟೆಹಳ್ಳಿಯ ಪೋಲಿಸ್ ಸ್ಟೇಷನ್ ಹಿಂಭಾಗದ ದೇವಸ್ಥಾನವೊಂದರಲ್ಲಿ ತಾಳಿ ಕಟ್ಟಿಸಿಕೊಂಡು ಪರಸ್ಪರರು ಮದುವೆ ಕೂಡ ಆಗಿದ್ದಾರೆ.

ಇಷ್ಟೆಲ್ಲಾ ಆದ ಬಳಿಕವೂ ಸಾಲದ್ದಕ್ಕೆ ಅನ್ನಪೂರ್ಣಳ ಮನೆಯವರಿಗೆ ಮಾರುತಿ ವಿಷಯ ತಿಳಿಸಿ ಇಬ್ಬರ ಪೋಟೋಗಳನ್ನು ಕಳಿಸಿದ್ದ. ಆದರೆ ಅನ್ನಪೂರ್ಣ ಮನೆಯವರು ಇದಕ್ಕೆ ಒಪ್ಪದೆ, ಸಾಯುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ಅನ್ನಪೂರ್ಣ ಮಾರುತಿಯಿಂದ ದೂರಾಗಿದ್ದು, ಮರೆತು ಬಿಡುವಂತೆ ಹೇಳುತ್ತಿದ್ದಾರೆ.

ನೊಂದ ಮಾರುತಿ ನನಗೆ ನೀನೇ ಬೇಕು.. ನೀನೇ ಬೇಕು ಅಂತ ಗೋಗರೆಯುತ್ತಿದ್ದಾನೆ. ಒಟ್ಟಾರೆ ಮಹಿಳಾ ಪಿಎಸ್‌'ಐ ಪ್ರೀತಿಗೆ ನಿಜವಾಗಿಯೂ ಜಾತಿಯ ಭೂತ ಅಡ್ಡ ಬಂತಾ? ಪ್ರಿಯಕರ ಹೇಳುತ್ತಿದ್ದ ಗಂಟೆಗೊಂದು ಸುಳ್ಳು ಆಕೆಯನ್ನು ಕಂಗೆಡಿಸಿತ್ತಾ? ಗೊತ್ತಿಲ್ಲ ಇದಕ್ಕೆಲ್ಲ ಉತ್ತರ ಸಿಗಬೇಕಾದರೆ ಅನ್ನಪೂರ್ಣರೇ ಬಾಯಿಬಿಡಬೇಕು.