ಕೋಟಿ ಕೋಟಿ ಸಂಪಾದನೆಯ ಆಸೆಗೆ ಬಿದ್ದು ರಿಯಲ್ ಎಸ್ಟೇಟ್ ಉದ್ಯಮಿಯೋರ್ವರು ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ.

ಬೆಂಗಳೂರು (ಜ.09): ಕೋಟಿ ಕೋಟಿ ಸಂಪಾದನೆಯ ಆಸೆಗೆ ಬಿದ್ದು ರಿಯಲ್ ಎಸ್ಟೇಟ್ ಉದ್ಯಮಿಯೋರ್ವರು ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ. ಅಮೆರಿಕ ಮೂಲದ ಮಹಿಳೆಯ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ. ಫೇಸ್’ಬುಕ್’ನಲ್ಲಿ ಪರಿಚಯವಾಗಿದ್ದ ಮಹಿಳೆ ಹಣವನ್ನು ಕಳುಹಿಸಿದ್ದೇನೆ. ಬಾಂಬೆಯ ಕೋರಿಯರ್ ಅಲ್ಲಿ ಹಣ ಕಟ್ಟಿ ಸೂಟ್ಕೇಸ್ ಬಿಡಿಸಿಕೊಳ್ಳಲು ಹೇಳಿದ್ದಾಳೆ.

ಅಲ್ಲದೇ 2 ಮಿಲಿಯನ್ ಡಾಲರ್’ಗೆ ಇಂಡಿಯನ್ ಟ್ಯಾಕ್ಸ್ ಕಟ್ಟುವಂತೆಯೂ ಕೂಡ ಹೇಳಿದ್ದಾರೆ. 2 ಮಿಲಿಯನ್ ಆಸೆಗಾಗಿ ಆದಿ ನಾರಾಯಣ ಎನ್ನುವ ಉದ್ಯಮಿ 20 ಲಕ್ಷ ಹಣವನ್ನು ಕಟ್ಟಿ ಮೋಸ ಹೋಗಿದ್ದಾರೆ. ಕೊನೆಗೆ ಬಾಕ್ಸ್ ತೆಗೆದಾಗ ಕಂಡಿರುವುದು ಕಪ್ಪು ನೋಟುಗಳಾಗಿದ್ದವು. ಮೋಸ ಹೋದ ಆದಿನಾರಾಯಣ ಅವರು ಇದೀಗ ನ್ಯಾಯಕ್ಕಾಗಿ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.