ಮಾನಮತ್ತ ಪ್ರಯಾಣಿಕನನ್ನು ಮಹಿಳಾ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಸ್ನಿಂದ ಇಳಿಸಿದ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಘಟಕದ ಮಹಿಳಾ ಕಂಡಕ್ಟರ್ ಎಸ್.ಎಂ.ಗರಸಂಗಿ, ಪ್ರಯಾಣಿಕನ ಜತೆ ಜಗಳಕ್ಕಿಳಿದು ಬಸ್ನಿಂದ ಇಳಿಸಿದ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹುಬ್ಬಳ್ಳಿ(ಜ.19): ಮಾನಮತ್ತ ಪ್ರಯಾಣಿಕನನ್ನು ಮಹಿಳಾ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಸ್ನಿಂದ ಇಳಿಸಿದ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಘಟಕದ ಮಹಿಳಾ ಕಂಡಕ್ಟರ್ ಎಸ್.ಎಂ.ಗರಸಂಗಿ, ಪ್ರಯಾಣಿಕನ ಜತೆ ಜಗಳಕ್ಕಿಳಿದು ಬಸ್ನಿಂದ ಇಳಿಸಿದ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹುಬ್ಬಳ್ಳಿ-ವಿಜಯಪುರ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕನನ್ನು ಅವಾಚ್ಯವಾಗಿ ನಿಂದಿಸಿ, ಬಸ್ನಿಂದ ಕೆಳಗಿಳಿಸುವುದನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಟಿಕೇಟ್ ವಿಚಾರದಲ್ಲಿ ಈ ಗಲಾಟೆ ನಡೆದಿದೆದ್ದು, ಹಣ ಕೊಟ್ಟಿದ್ದೀನಿ ಅಂತ ಪ್ರಯಾಣಿಕ ವಾದಿಸಿದರೆ, ದುಡ್ಡು ಕೊಟ್ಟಿಲ್ಲ ಅಂತ ನಿರ್ವಾಹಕಿ ಗರಸಂಗಿ ವಾದಿಸಿದ್ದಾರ.

ಸದ್ಯ ಈ ವಿಡಿಯೋ ಸಂಸ್ಥೆ ಅಧಿಕಾರಿಗಳಿಗೂ ತಲುಪಿದೆ. ವಿಭಾಗೀಯ ಸಂಚಾರ ಶಾಖೆ ಮುಖ್ಯಸ್ಥರು, ವಿಡಿಯೋ ತುಣುಕು ಪರಿಶೀಲನೆ ಮಾಡಿದ್ದು, ಈ ಕುರಿತು ಘಟಕ ವ್ಯವಸ್ಥಾಪಕರಿಂದ ವರದಿ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.