ಆಕೆ ಆ ಮನೆಯ ಒಬ್ಬಳೇ ಒಬ್ಬಳು ಮುದ್ದಿನ ಮಗಳು, ಚೆನ್ನಾಗಿರಲಿ ಅಂತ ಮದುವೆ ಮಾಡಿ ಕೊಟ್ಟಿದ್ರು, ಇನ್ನು ಮೊಮ್ಮಗ ಹುಟ್ಟುತ್ತಲೇ ಪ್ರೀತಿ ಇಮ್ಮಡಿಯಾಗಿತ್ತು, ಅದ್ಯಾಕೋ ಏನೋ ಗೊತ್ತಿಲ್ಲ, ಆಕೆ ಆತ್ಮಹತ್ಯೆ ಜೊತೆಗೆ ಮೊಮ್ಮಗನ ಅನುಮಾನಾಸ್ಪದ ಸಾವು ಆಕೆ ತವರುಮನೆಯವರನ್ನು ಧಿಗ್ಬ್ರಾಂತರನ್ನಾಗಿಸಿತ್ತು, ಇದು ಆತ್ಮಹತ್ಯೆಯಲ್ಲ, ಅತ್ತೆ ಚುನಾವಣೆಗಾಗಿ ನಡೆದ ಹಣಕ್ಕಾಗಿ ನಡೆದ ವರದಕ್ಷಿಣೆ ಕಿರುಕಳದ ಕೊಲೆ ಅಂತ ಆರೋಪ ಕೇಳಿ ಬಂದಿತ್ತು. ಅದು ಆತ್ಮಹತ್ಯೆಯೋ ? ಕಿರುಕಳದ ಕೊಲೆಯೋ? ಏನು ಎತ್ತ ಎಂಬುದರ ಕುರಿತ ವರದಿ ಇಲ್ಲಿದೆ.
ಬಾಗಲಕೋಟೆ(ಜು.27): ಆಕೆ ಆ ಮನೆಯ ಒಬ್ಬಳೇ ಒಬ್ಬಳು ಮುದ್ದಿನ ಮಗಳು, ಚೆನ್ನಾಗಿರಲಿ ಅಂತ ಮದುವೆ ಮಾಡಿ ಕೊಟ್ಟಿದ್ರು, ಇನ್ನು ಮೊಮ್ಮಗ ಹುಟ್ಟುತ್ತಲೇ ಪ್ರೀತಿ ಇಮ್ಮಡಿಯಾಗಿತ್ತು, ಅದ್ಯಾಕೋ ಏನೋ ಗೊತ್ತಿಲ್ಲ, ಆಕೆ ಆತ್ಮಹತ್ಯೆ ಜೊತೆಗೆ ಮೊಮ್ಮಗನ ಅನುಮಾನಾಸ್ಪದ ಸಾವು ಆಕೆ ತವರುಮನೆಯವರನ್ನು ಧಿಗ್ಬ್ರಾಂತರನ್ನಾಗಿಸಿತ್ತು, ಇದು ಆತ್ಮಹತ್ಯೆಯಲ್ಲ, ಅತ್ತೆ ಚುನಾವಣೆಗಾಗಿ ನಡೆದ ಹಣಕ್ಕಾಗಿ ನಡೆದ ವರದಕ್ಷಿಣೆ ಕಿರುಕಳದ ಕೊಲೆ ಅಂತ ಆರೋಪ ಕೇಳಿ ಬಂದಿತ್ತು. ಅದು ಆತ್ಮಹತ್ಯೆಯೋ ? ಕಿರುಕಳದ ಕೊಲೆಯೋ? ಏನು ಎತ್ತ ಎಂಬುದರ ಕುರಿತ ವರದಿ ಇಲ್ಲಿದೆ.
ಬಾಗಲಕೋಟೆಯ ವಿದ್ಯಾಗಿರಿಯ 16ನೇ ಕ್ರಾಸ್'ನಲ್ಲಿ ನೇಣಿಗೆ ಶರಣಾದವಳು ದೀಪಾ ಮೇಟಿ. ಮುಧೋಳದ ಮಾಜಿ ಸೈನಿಕ ಕಲ್ಲಪ್ಪ-ಕಸ್ತೂರಿ ದಂಪತಿಯ ಒಬ್ಬಳೇ ಒಬ್ಬ ಮಗಳು. ಮೇಟಿ ಮನೆತನಕ್ಕೆ ಸೇರಿದ ಕಾಂಟ್ರ್ಯಾಕ್ಟರ್ ಕೆಲಸ ಮಾಡಿಕೊಂಡಿದ್ದ ಸಂತೋಷ್'ಗೆ 2013ರಲ್ಲಿ ದೀಪಾಳನ್ನು ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಹೊಸದರಲ್ಲಿ ಚೆನ್ನಾಗೇ ಇದ್ದರು. ಆದರೆ ನಿನ್ನೆ ಏಕಾಏಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾಯಿ, ಮಗು ಸಾವಿಗೆ ಶರಣಾಗಿದ್ದಾರೆ.
ಕಳೆದ ಬಾರಿಯ ಜಿಲ್ಲಾ ಪಂಚಾಯಿತಿ ಚುನಾವಣೆ ದೀಪಾಳ ಅತ್ತೆ ಶಾರದಾ ಸ್ಪರ್ಧಿಸಿ ಸೋತಿದ್ದಾರೆ. ಇದಾದ ಬಳಿಕ ಸೊಸೆ ದೀಪಾಳಿಗೆ ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದರಂತೆ. ಗಂಡ ಹಾಗೂ ನಾದಿನಿ ಕಿರುಕುಳ ನೀಡುತ್ತಿದ್ರಂತೆ. ದೀಪಾ ಈ ವಿಷಯವನ್ನು ತನ್ನ ತಾಯಿ ಬಳಿ ಹೇಳಿಕೊಮಡಿದ್ದಳಂತೆ. ಇದೀಗ ಏಕಾಏಕಿ ಈ ಘಟನೆ ನಡೆದಿದ್ದು, ನ್ಯಾಯಾಕ್ಕಾಗಿ ದೀಪಾ ಪೋಷಕರು ಆಗ್ರಹಿಸುತ್ತಿದ್ದಾರೆ.
ಸದ್ಯ ಪೊಲೀಸರು ದೀಪಾಳ ಗಂಡ ಹಾಗೂ ಅವರ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕಳದ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.. ಸಂಪೂರ್ಣ ತನಿಖೆ ಬಳಿಕವೇ ಸಾವಿನ ಹಿಂದಿನ ಸತ್ಯ ಬಯಲಾಗಬೇಕಿದೆ.
