Asianet Suvarna News Asianet Suvarna News

ಜೂಜುಕೋರರು, ವೈಶ್ಯವಾಟಿಕೆಯ ಕೇಂದ್ರವಾಗಿದೆ 2ಕೋಟಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಲೇಡಿಸ್ ಪಿಜಿ

ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಳ್ಳೆಯ ಭವಿಷ್ಯಕ್ಕಾಗಿ ಕೋಟಿ ಕೋಟಿ ಹಣ ಸುರಿಯುತ್ತಿದೆ. ಆದರೆ ಅಧಿಕಾರಿಗಳ ಮತ್ತು ರಾಜಕಾರಣಿಗಳ ದಿವ್ಯ ನಿರ್ಲಕ್ಷ್ಯದಿಂದ ಅಂತಹ ಸವಲತ್ತುಗಳಿಂದ ವಿದ್ಯಾರ್ಥಿಗಳು ವಂಚಿತವಾಗುತ್ತಿದ್ದಾರೆ. ಇದಕ್ಕೆ ಬೀದರ್​ ಜಿಲ್ಲೆಯಲ್ಲಿರುವ ಈ ಹಾಸ್ಟಲೇ ​ಸಾಕ್ಷಿ.

ladies PG Become a illegal activity centre

ಬೀದರ್(ಅ.20): ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಳ್ಳೆಯ ಭವಿಷ್ಯಕ್ಕಾಗಿ ಕೋಟಿ ಕೋಟಿ ಹಣ ಸುರಿಯುತ್ತಿದೆ. ಆದರೆ ಅಧಿಕಾರಿಗಳ ಮತ್ತು ರಾಜಕಾರಣಿಗಳ ದಿವ್ಯ ನಿರ್ಲಕ್ಷ್ಯದಿಂದ ಅಂತಹ ಸವಲತ್ತುಗಳಿಂದ ವಿದ್ಯಾರ್ಥಿಗಳು ವಂಚಿತವಾಗುತ್ತಿದ್ದಾರೆ. ಇದಕ್ಕೆ ಬೀದರ್​ ಜಿಲ್ಲೆಯಲ್ಲಿರುವ ಈ ಹಾಸ್ಟಲೇ ​ಸಾಕ್ಷಿ.

ಪದವಿ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಿದ ವಸತಿ ನಿಲಯ ಕುಡುಕರ, ಜೂಜುಕೋರರ, ಸಮಾಜ ಘಾತುಕರ ಪಾಲಾಗಿದೆ. ಗುಲ್ಬರ್ಗಾ ವಿವಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದು,  ಸರ್ಕಾರ 2010-11ರಲ್ಲಿ ಬರೋಬ್ಬರಿ 2ಕೋಟಿ 20ಲಕ್ಷ ರೂ. ಖರ್ಚು ಮಾಡಿ ಎರಡೂ ವಸತಿ ನಿಲಯದ ಕಟ್ಟಡಗಳು ನಿರ್ಮಾಣಮಾಡಿ  5 ವಷಗಳೇ ಕಳೆದಿದೆ. ಇನ್ನೂ ಉದ್ಘಾಟನೆಯಾಗಿಲ್ಲ ಬರೀ ಕುಡಿಯುವ ನೀರಿನ ನೆಪಮಾಡಿ 5 ವರ್ಷದಿಂದ ಸ್ಟುಡೆಂಟ್​ಗಳ ಉಪಯೋಗಕ್ಕೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಅಧಿಕಾರಿಗಳು.

ಇನ್ನೂ ಕೆಲ ದಿನ ಕಳೆದರೆ ಸರ್ಕಾರದ ಕೋಟಿ ಕೋಟಿ ಹಣ ಮಣ್ಣುಪಾಲಾದರೂ ಅಚ್ಚರಿ ಪಡಬೇಕಿಲ್ಲ.

Follow Us:
Download App:
  • android
  • ios