ಉತ್ತರ ಪ್ರದೇಶದ ಜಯಂತಿಪುರ್ ಗ್ರಾಮದಲ್ಲಿ ಮಹಿಳೆಯರ ಆಕ್ರೋಶ ಸ್ಫೋಟಗೊಂಡಿದೆ. ಏಕಾಏಕಿ ಮದ್ಯದಂಗಡಿ ಮೇಲೆ ದಾಳಿ ನಡೆಸಿದ ಮಹಿಳೆಯರು, ಅಂಗಡಿಗೆ ಬೆಂಕಿಯಿಟ್ಟಿದ್ದಾರೆ. ಕೆಲವರು ಲಿಕ್ಕರ್ ಬಾಟಲ್‌'ಗಳನ್ನು ಒಡೆದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ(ಎ.02): ಉತ್ತರ ಪ್ರದೇಶದ ಜಯಂತಿಪುರ್ ಗ್ರಾಮದಲ್ಲಿ ಮಹಿಳೆಯರ ಆಕ್ರೋಶ ಸ್ಫೋಟಗೊಂಡಿದೆ. ಏಕಾಏಕಿ ಮದ್ಯದಂಗಡಿ ಮೇಲೆ ದಾಳಿ ನಡೆಸಿದ ಮಹಿಳೆಯರು, ಅಂಗಡಿಗೆ ಬೆಂಕಿಯಿಟ್ಟಿದ್ದಾರೆ. ಕೆಲವರು ಲಿಕ್ಕರ್ ಬಾಟಲ್'ಗಳನ್ನು ಒಡೆದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರ ಈ ಆಕ್ರೋಶಕ್ಕೆ ಕಾರಣವಾಗಿದ್ದು, ಮದ್ಯದಂಗಡಿ. ಇಲ್ಲಿನ ಜಯಂತಿಪುರ್'ನಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಮದ್ಯದಂಗಡಿ ತೆರೆಯಲಾಗಿದೆ. ಇದು ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘನೆ ಎಂದು ಆರೋಪಿಸಿದ ಮಹಿಳೆಯರು, ಗುಂಪುಗೂಡಿ ಮದ್ಯದಂಗಡಿಗೆ ಬೆಂಕಿಯಿಟ್ಟು, ಧ್ವಂಸಗೊಳಿಸಿದ್ದಾರೆ.
ಮದ್ಯದಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು, ಮಹಿಳೆಯರ ವಿರುದ್ಧವೇ ಕೇಸ್ ದಾಖಲಿಸಿಕೊಂಡಿದ್ದಾರೆ.
