Asianet Suvarna News Asianet Suvarna News

ನೆಹರು ಹಾರ ಹಾಕಿದ್ದೇ ತಪ್ಪಾಯ್ತು.. ಇಂದಿಗೂ ತಪ್ಪಿಲ್ಲ ಆಕೆಯ ಪರದಾಟ

ಅದು1959ರ ಸಮಯ. ಸ್ವಾತಂತ್ರ್ಯ ಬಂದು 12 ವರ್ಷಗಳಷ್ಠೆ ಕಳೆದಿತ್ತು. ಪಶ್ಚಿಮ ಬಂಗಾಳದ ಹಳ್ಳಿಯೊಂದಕ್ಕೆ ಅಣೆಕಟ್ಟನ್ನ ಉದ್ಘಾಟಿಸಲು ನೆಹರು ತೆರಳಿದ್ದರು. ಕಾರ್ಮಿಕರು ಕಷ್ಟಪಟ್ಟು ಕಟ್ಟಿದ್ದ ಡ್ಯಾಂ ಅನ್ನ ಕಾರ್ಮಿಕ ಮಹಿಳೆಯ ಕೈಯಲ್ಲಿ ಉದ್ಘಾಟಿಸಲು ಇಚ್ಛಿಸಿದ ನೆಹರು, ಬುದ್ನಿ ಮುಂಜಿಯಾನ್ ಕೈಯಲ್ಲಿ ಡ್ಯಾಂ ಉದ್ಘಾಟಿಸಿದರು. ಮೊದಲ ಬಾರಿಗೆ ಒಬ್ಬ ಕಾರ್ಮಿಕ ಮಹಿಳೆ ಅಣೆಕಟ್ಟು ಉದ್ಘಾಟಿಸಿದ ಕ್ಷಣವದು. ಈ ಸಂದರ್ಭ ನೆಹರು, ಹೂವಿನ ಹಾರವನ್ನ ಬುದ್ನಿಗೆ ಗೌರವಪೂರ್ವಕವಾಗಿ ಹಾಕಿದ್ದರು. ಆದರೆ, ಈ ಐತಿಹಾಸಿಕ ಕ್ಷಣ ಆಕೆಯ ಬಾಳಿಗೇ ಕೊಳ್ಳಿ ಇಟ್ಟಿತ್ತು.

Labelled and punished as Jawahar Lal Nehru wife since 1959

ಪಾಟ್ನಾ(ನ.03): ದೇಶ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ನಮ್ಮಲ್ಲಿ ಇಂದಿಗೂ ಕೆಲ ಗೊಡ್ಡು ಸಂಪ್ರದಾಯಗಳಿಗೆ ಜೋತು ಬೀಳುವ ಜನರಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ಕುರಿತಾದ ಕಟ್ಟುಪಾಡುಗಳು ಹೇಳತೀರದು. ಇಂದಿಗೂ ಜಾತಿ ಹೆಸರಲ್ಲಿ ಪ್ರಾಣ ತೆಗೆಯುವ ಜನರಿದ್ದಾರೆ. 57 ವರ್ಷಗಳ ಹಿಂದಿನ ಸ್ಥಿತಿ ಹೇಗಿರಬಹುದು ನೀವೇ ಊಹಿಸಿ. ಯಾರಾದರೂ ಹೆಣ್ಣು ಮಗಳು ಒಬ್ಬ ಪುರುಷನ ಕೈಗೆ ಹಿಡಿದರೆ ಆತನೇ ಆಕೆಯ ಗಂಡ ಎಂದು ಘೋಷಿಸುವ ಸಂಪ್ರದಾಯವೂ ಇತ್ತು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಇಂತಹ ಸಂಪ್ರದಾಯದ ಸುಳಿಗೆ ಸಿಲುಕಿ ಈಗಲೂ ಸಂಕಷ್ಟದಲ್ಲಿದ್ದಾರೆ.

ಕಾರ್ಮಿಕ ಮಹಿಳೆಯ ಕೈಯಲ್ಲಿ ಅಣೆಕಟ್ಟು ಉದ್ಘಾಟಿಸಿದ್ದ ನೆಹರು: ಅದು1959ರ ಸಮಯ. ಸ್ವಾತಂತ್ರ್ಯ ಬಂದು 12 ವರ್ಷಗಳಷ್ಠೆ ಕಳೆದಿತ್ತು. ಪಶ್ಚಿಮ ಬಂಗಾಳದ ಹಳ್ಳಿಯೊಂದಕ್ಕೆ ಅಣೆಕಟ್ಟನ್ನ ಉದ್ಘಾಟಿಸಲು ನೆಹರು ತೆರಳಿದ್ದರು. ಕಾರ್ಮಿಕರು ಕಷ್ಟಪಟ್ಟು ಕಟ್ಟಿದ್ದ ಡ್ಯಾಂ ಅನ್ನ ಕಾರ್ಮಿಕ ಮಹಿಳೆಯ ಕೈಯಲ್ಲಿ ಉದ್ಘಾಟಿಸಲು ಇಚ್ಛಿಸಿದ ನೆಹರು, ಬುದ್ನಿ ಮುಂಜಿಯಾನ್ ಕೈಯಲ್ಲಿ ಡ್ಯಾಂ ಉದ್ಘಾಟಿಸಿದರು. ಮೊದಲ ಬಾರಿಗೆ ಒಬ್ಬ ಕಾರ್ಮಿಕ ಮಹಿಳೆ ಅಣೆಕಟ್ಟು ಉದ್ಘಾಟಿಸಿದ ಕ್ಷಣವದು. ಈ ಸಂದರ್ಭ ನೆಹರು, ಹೂವಿನ ಹಾರವನ್ನ ಬುದ್ನಿಗೆ ಗೌರವಪೂರ್ವಕವಾಗಿ ಹಾಕಿದ್ದರು. ಆದರೆ, ಈ ಐತಿಹಾಸಿಕ ಕ್ಷಣ ಆಕೆಯ ಬಾಳಿಗೇ ಕೊಳ್ಳಿ ಇಟ್ಟಿತ್ತು.

ಬುದ್ನಿಯನ್ನ ನೆಹರೂ ಪತ್ನಿ ಎಂದು ಘೋಷಿಸಿದ ಪಂಚಾಯ್ತಿ: ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ಅಂದು ರಾತ್ರಿಯೇ ಪಂಚಾಯ್ತಿ ಕರೆದ ಸಂತಾಲಿ ಸಮುದಾಯದ ಮುಖಂಡರು, ಈಕೆ ಇನ್ಮುಂದೆ ನೆಹರು ಪತ್ನಿ ಎಂದು ಘೋಷಿಸಿದರು.  ನೆಹರು ನಮ್ಮ ಜನಾಂಗದವರಲ್ಲ, ಅನ್ಯ ಜನಾಂಗದವರನ್ನ ಮದುವೆಯಾದಳು ಎಂಬ ಕಾರಣವೊಡ್ಡಿ ಸಂತಾಲಿ ಸಮುದಾಯದಿಂದ ಹೊರಹಾಕಲಾಯಿತು. ಈ ಸಂದರ್ಭ ದಾಮೋದರ್ ವ್ಯಾಲಿ ಕಾರ್ಪೊರೆಸನ್ನಿನ್ಲಿ ಕೆಲಸ ಮಾಡುತ್ತಿದ್ದ ಬುದ್ನಿಯನ್ನ ಕೆಲ ವರ್ಷಗಳ ಬಳಿಕ ಅಲ್ಲಿಂದಲೂ ಹೊರಗೆ ಕಳುಹಿಸಲಾಯ್ತು. ಬಳಿಕ ಬುದ್ನಿಗೆ ಸುಧೀರ್ ದತ್ತಾ ಎಂಬುವನ ಜೊತೆ ಪ್ರೇಮಾಂಕುರವಾಯಿತಾದರೂ ಸಮಾಜದ ಭಯದಿಂದ ಮದುವೆ ಆಗಲಿಲ್ಲ. ಸುಧೀರ್ ಜೊತೆಯಾಗಿ ಬುದ್ನಿ 3 ಮಕ್ಕಳನ್ನ ಪಡೆದಿದ್ದಾರೆ.

ನೆರವಿಗೆ ಬಂದಿದ್ದ ರಾಜೀವ್ ಗಾಂಧಿ: ಬುದ್ನಿ ಕಥೆ ಕೇಳಿದ ರಾಜೀವ್ ಗಾಂಧಿ ಬಿಹಾರಕ್ಕೆ ಕರೆಸಿಕೊಂಡು ಡಿವಿಸಿಯಲ್ಲಿ ಮತ್ತೆ ಕೆಲಸ ಕೊಡಿಸಿದರು. ಇದಿಗ, ಬುದ್ನಿ ಕೆಲಸದಿಂದ ನಿವೃತ್ತಿ ಹೊಂದಿದ್ದಾರೆ. ಈಗಲೂ ತನ್ನ ಹಳ್ಳಿಗೆ ತೆರಳಿದರೆ ಹಳ್ಳಿಯ ಜನ ಅಗೌರವದಿಂದ ಕಾಣುತ್ತಿದ್ದಾರಂತೆ.ಇದೀಗ, ರಾಹುಲ್ ಗಾಂಧಿ ನೆರವು ಕೋರಿರುವ ಬುದ್ನಿ ತನ್ನ ಹಳ್ಳಿಯ ಮನೆಯನ್ನ ವಾಪಸ್ ಕೊಡಿಸಿ, ಮಕ್ಕಳಿಗೆ ಉದ್ಯೋಗ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಕೃಪೆ: ಫೈನಾನ್ಷಿಯಲ್ ಎಕ್ಸ್`ಪ್ರೆಸ್