ಹೀರೋ ಆದ ಮಾಜಿ ಸಿಎಂ ಸಿದ್ದರಾಮಯ್ಯ

Kuruba MLAs Happy About Siddaramaiah
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮುದಾಯದ ಹೀರೋ. ಆದರೆ, ಸಿದ್ದರಾಮಯ್ಯ ಅವರನ್ನು ವಿಲನ್‌ ಎಂದು ಬಿಂಬಿಸುತ್ತಿರುವ ಎಚ್‌.ಎಂ. ರೇವಣ್ಣ ಅವರೇ ವಾಸ್ತವವಾಗಿ ಸಮುದಾಯದ ವಿಲನ್‌ ಎಂದು ಕಾಂಗ್ರೆಸ್‌ನ ಕುರುಬ ಸಮುದಾಯದ ಶಾಸಕರು ಆರೋಪಿಸಿದ್ದಾರೆ.
 

ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮುದಾಯದ ಹೀರೋ. ಆದರೆ, ಸಿದ್ದರಾಮಯ್ಯ ಅವರನ್ನು ವಿಲನ್‌ ಎಂದು ಬಿಂಬಿಸುತ್ತಿರುವ ಎಚ್‌.ಎಂ. ರೇವಣ್ಣ ಅವರೇ ವಾಸ್ತವವಾಗಿ ಸಮುದಾಯದ ವಿಲನ್‌ ಎಂದು ಕಾಂಗ್ರೆಸ್‌ನ ಕುರುಬ ಸಮುದಾಯದ ಶಾಸಕರು ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೈರತಿ ಸುರೇಶ್‌ ಹಾಗೂ ರಾಮಪ್ಪ ಅವರು, ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ಹೀರೋ. ಈ ಬಾರಿ ಸಚಿವ ಸಂಪುಟದಲ್ಲಿ ಅವರು ಕುರುಬರಿಗೆ ಅನ್ಯಾಯ ಮಾಡಿದ್ದಾರೆ ಎಂಬುದು ಸುಳ್ಳು. ಇನ್ನೂ ಆರು ಸ್ಥಾನಗಳು ಖಾಲಿ ಇವೆ. ಈ ಪೈಕಿ ಎರಡು ಸ್ಥಾನವನ್ನು ಕುರುಬ ಸಮುದಾಯಕ್ಕೆ ದೊರೆಯುವಂತೆ ಸಿದ್ದರಾಮಯ್ಯ ಅವರೇ ಮಾಡುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರನ್ನು ಕುರುಬ ಸಮುದಾಯದ ವಿಲನ್‌ ಎಂದು ಎಚ್‌.ಎಂ. ರೇವಣ್ಣ ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಸದಾ ಸಮುದಾಯ ಹೀರೋ ಆಗಿಯೇ ಇರುತ್ತಾರೆ. ಅವರನ್ನು ವಿಲನ್‌ ಎನ್ನುತ್ತಿರುವ ರೇವಣ್ಣ ಅವರೇ ವಾಸ್ತವವಾಗಿ ವಿಲನ್‌. ಸಮುದಾಯ ಎಂದಿಗೂ ಸಿದ್ದರಾಮಯ್ಯ ಪರ ಇರುತ್ತದೆ ಎಂದು ಹೇಳಿದರು.

loader