ಹುಬ್ಬಳ್ಳಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ  ವಿಧಾನಸಭಾ ಉಪ ಚುನಾವಣೆ ಕಾವು ಹೆಚ್ಚಾಗಿದೆ. ಕುಂದಗೋಳ ವಿಧಾನಸಭೆಗೆ ಉಪ ಚುನಾವಣೆ ನಡೆಯುತ್ತಿದ್ದು, ಇಲ್ಲಿನ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ ಸ್ಫೋಟವಾಗಿದೆ. 

ಪಕ್ಷದಿಂದ ಎಮ್.ಆರ್ ಪಾಟೀಲ್ ಗೆ ನೀಡುವಂತೆ ಬಿಜೆಪಿ ಮುಖಂಡ ಪ್ರಕಾಶ್ ಗೌಡ ಪಾಟೀಲ್  ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾಗೆ ಟ್ವೀಟ್ ಮಾಡಿ ಬೇಡಿಕೆ ಇಟ್ಟಿದ್ದಾರೆ.  ಕುಂದಗೋಳ ಕ್ಷೇತ್ರದಲ್ಲಿ ಎಮ್.ಆರ್.ಪಾಟೀಲ್ ಪರವಾದ ಅಲೆಯಿದ್ದು, ಸ್ಥಳೀಯ ಮುಖಂಡರು ಇವರನ್ನು ಕಡೆಗಣಿಸಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.  

ಬಿಜೆಪಿ ಈಗಾಗಲೇ ಎಸ್.ಐ ಚಿಕ್ಕನಗೌಡರಿಗೆ ಟಿಕೆಟ್ ನೀಡಲು ಸಿದ್ಧತೆ ನಡೆಸಿದ್ದು, ಅಧಿಕೃತವಾಗಿ ಈ ಬಗ್ಗೆ ಘೋಷಣೆಯೊಂದೇ ಬಾಕಿ ಇದೆ. ಬಿ ಫಾರಂ ವಿತರಣೆಗೂ ಮೊದಲೇ ಚಿಕ್ಕನಗೌಡ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ನಿಟ್ಟಿನಲ್ಲಿ ದೂರು ನೀಡಿದ್ದಾರೆ.