Asianet Suvarna News Asianet Suvarna News

ಗಡಿಪ್ರದೇಶ ಅಧ್ಯಯನ ಸಮಿತಿ ಅಧ್ಯಕ್ಷರಾಗಿ ಕುಂವೀ ನೇಮಕ

ಸಮಿತಿಗೆ ರಾಯಚೂರು, ಬಳ್ಳಾರಿ, ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಇವರೆಲ್ಲರ ತಂಡ 6 ತಿಂಗಳ ಕಾಲ ವಿವಿಧೆಡೆ ತೆರಳಿ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದ್ದಾರೆ.

Kumvi now Committee Chairmen

ರಾಯಚೂರು(ಡಿ.1): ಗಡಿ ಪ್ರದೇಶ ಅಧ್ಯಯನ ಸಮಿತಿ ರಚನೆ ಮಾಡಲಾಗಿದ್ದು, ಅದಕ್ಕೆ ಹಿರಿಯ ಸಾಹಿತಿ ಕು. ವೀರಭದ್ರಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.

ಸುವರ್ಣ ನ್ಯೂಸ್ ಸೋದರ ಪತ್ರಿಕೆ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಈ ಸಮಿತಿಗೆ ರಾಯಚೂರು, ಬಳ್ಳಾರಿ, ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಇವರೆಲ್ಲರ ತಂಡ 6 ತಿಂಗಳ ಕಾಲ ವಿವಿಧೆಡೆ ತೆರಳಿ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದ್ದಾರೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಈ ಅಧ್ಯಯನಕ್ಕೆ ಬೇಕಾದಷ್ಟು ಅನುದಾನ ಇದೆ ಎಂದರು.

ಸಮ್ಮೇಳನದಲ್ಲಿ ನಡೆಯುವ ಚರ್ಚೆಗಳು ನಿರರ್ಥಕವಲ್ಲ. ಇತ್ತೀಚೆಗೆ ಹೊರನಾಡ ಕನ್ನಡಿಗರ ಸಮಾವೇಶ ಆಯೋಜಿಸಲಾಗಿತ್ತು. ಅದರಲ್ಲಿ ಗಡಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗಿತ್ತು. ಅದರ ಫಲಶ್ರುತಿಯಾಗಿ ಗಡಿ ಪ್ರದೇಶ ಅಧ್ಯಯನ ಸಮಿತಿ ರಚಿಸಿ ಅಧ್ಯಕ್ಷರನ್ನು ನೇಮಿಸಲಾಗಿದೆ ಎಂದು ಬಳಿಗಾರ್ ಹೇಳಿದರು.

Follow Us:
Download App:
  • android
  • ios