Asianet Suvarna News Asianet Suvarna News

'ಯಡಿಯೂರಪ್ಪ ದೆಹಲಿಗೆ ಹೋಗಿರುವುದು ಆಪರೇಷನ್ ಕಮಲದ ಸಂತ್ರಸ್ತರ ರಕ್ಷಣೆಗಾಗಿ'

ರಾಜ್ಯದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದೇ ತಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಿಢೀರ್ ದೆಹಲಿಗೆ ಹಾರಿದ್ದಾರೆ. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

kumaraswamy slams BSY over the latter meeting Home Minister Amit Shah In Delhi
Author
Bengaluru, First Published Sep 22, 2019, 3:00 PM IST

ಬೆಂಗಳೂರು, (ಸೆ.22): ಸಿಎಂ ಯಡಿಯೂರಪ್ಪ ಅವರು ನಿನ್ನೆ (ಶನಿವಾರ)  ಸಂಜೆ ದಿಢೀರ್ ದೆಹಲಿಗೆ ಹೋಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬೈ ಎಲೆಕ್ಷನ್ ಗೌಪ್ಯ ಸಭೆ: ಅನರ್ಹ ಶಾಸಕರ ದುಂಬಾಲು, ದೆಹಲಿಗೆ ಯಡಿಯೂರಪ್ಪ ದೌಡು..!

ಟ್ವೀಟ್ ಮಾಡಿರುವ ಮಾಜಿ ಕುಮಾರಸ್ವಾಮಿ, ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಗೆ ಹೋಗಿರುವುದು ಆಪರೇಷನ್ ಕಮಲದ ಸಂತ್ರಸ್ತರ ರಕ್ಷಣೆಗಾಗಿ. ಆದರೆ ತಾವು ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಧನ ಸಹಾಯ ಕೋರಲು ದೆಹಲಿಗೆ ತೆರಳಿದ್ದಾಗಿ ಹೇಳಿದ್ದಾರೆ. ಇದೊಂದು ರಾಜಕೀಯ ನಾಟಕ.

ಅಮಿತ್​ ಶಾ ಅವರ ಪ್ರಭಾವ ಬಳಸಿ ಪ್ರಜಾಪ್ರಭುತ್ವ ವಿರೋಧಿಯಾಗಿ ಮಾಡಿದ್ದ ಆಪರೇಷನ್​ ಕಮಲದಿಂದ ಸಂತ್ರಸ್ತರಾದ ಅನರ್ಹರನ್ನು ಬಚಾವ್​ ಮಾಡಿಸಲಷ್ಟೇ ಬಿ.ಎಸ್​.ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಆದರೆ ಯಡಿಯೂರಪ್ಪನವರು, ತಾವು ಅನರ್ಹ ಶಾಸಕರ ಬಗ್ಗೆ ಅಮಿತ್​ ಶಾ ಅವರೊಂದಿಗೆ ಚರ್ಚಿಸಿಲ್ಲ. ಅದನ್ನೆಲ್ಲ ಹೇಳುವ ಪ್ರಶ್ನೆಯೇ ಇಲ್ಲ. ನೆರೆ ಸಂತ್ರಸ್ತರಿಗಾಗಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಲಷ್ಟೇ ಬಂದಿದ್ದೆ ಎಂದು ತಿಳಿಸಿದ್ದಾರೆ ಎಂದು ಟ್ವೀಟ್ ಮೂಲಕ ಕಿಚಾಯಿಸಿದ್ದಾರೆ.

ಶನಿವಾರ ಮಧ್ಯಾಹ್ನ ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದೇ ತಡ ಬಿಎಸ್‌ವೈ ಹಾಗೂ ಅನರ್ಹ ಶಾಸಕರು ದಿಢೀರ್ ಗೌಪ್ಯ ಸಭೆ ನಡೆಸಿದರು. ಬಳಿಕ ಕೆಲ ಅತೃಪ್ತ ಶಾಸಕರ ಜತೆ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಈ ರೀತಿಯಾಗಿ ಬಿಎಸ್‌ವೈ ಕಾಲೆಳೆದಿದ್ದಾರೆ.

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ 6) ಯಶವಂತಪುರ 7) ಅಥಣಿ 8) ಕಾಗವಾಡ 9) ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರ. ಇನ್ನು

ಮಹತ್ವದ ದಿನಾಂಕಗಳು
ನಾಮಪತ್ರ ಸಲ್ಲಿಕೆ ಅಧಿಸೂಚನೆ - ಸೆಪ್ಟೆಂಬರ್ 23
ನಾಮಪತ್ರ ಸಲ್ಲಿಕೆ ಅಂತ್ಯ - ಸೆಪ್ಟೆಂಬರ್ 30
ನಾಮಪತ್ರ ಪರಿಶೀಲನೆ - ಅಕ್ಟೋಬರ್ 1
ನಾಮಪತ್ರ ವಾಪಸ್: ಅಕ್ಟೋಬರ್.3
ಮತದಾನ ಅಕ್ಟೋಬರ್ 21
ಫಲಿತಾಂಶ ಅಕ್ಟೋಬರ್ 24

Follow Us:
Download App:
  • android
  • ios