ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಪಕ್ಷದಿಂದ ಅಮಾನತಾಗಿರುವ ಜಮೀರ್ ಅಹಮದ್ ಹಾಗೂ ಬಾಬು ಬಂಡಿಸಿದ್ದೇಗೌಡರ ವಿರುದ್ದ ಹರಿಹಾಯ್ದರು.
ಮಂಡ್ಯ(ಡಿ.25): ನಿನ್ನೆ ಹಲಗೂರು ಸಮೀಪ ಕೊಲೆಯಾದ ಜೆಡಿಎಸ್ ಕಾರ್ಯಕರ್ತ ಬೆನಗನಹಳ್ಳಿಯ ಕುಮಾರ್ ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ, ಮಾತನಾಡಿದ ಕುಮಾರಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಯಾರ ಮೇಲೂ ಆಪಾದನೆ ಮಾಡಲ್ಲ. ಯಾರು ಈ ಕೊಲೆ ಮಾಡಿದ್ದಾರೋ ಅವರನ್ನ ಪೊಲೀಸ್ ಇಲಾಖೆ ಶೀಘ್ರವಾಗಿ ಬಂಧಿಸುವಂತೆ ಆಗ್ರಹಿಸಿದರು.
ಇದೇವೇಳೆ, ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಪಕ್ಷದಿಂದ ಅಮಾನತಾಗಿರುವ ಜಮೀರ್ ಅಹಮದ್ ಹಾಗೂ ಬಾಬು ಬಂಡಿಸಿದ್ದೇಗೌಡರ ವಿರುದ್ದ ಹರಿಹಾಯ್ದರು.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವುದಾಗಿ ನನಗೇ ನೇರವಾಗಿ ಹೇಳಿದ್ದರು. ನನ್ನ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದರು. ಅವರು ಹಾಗೆಯೇ ಮಾಡಿದ್ದಾರೆ, ಈಗ ಆಣೆ ಮಾಡಲು ಏನಿದೆ? ಅವರೆಲ್ಲ ತುಂಬಾ ದೊಡ್ಡವರಿದ್ದಾರೆ, ಅವರು ನಮ್ಮ ಪಕ್ಷಕ್ಕೆ ಬೇಡ.ಎಂದು ಕುಮಾರಸ್ವಾಮಿ ಹೇಳಿದ್ದಾರೆ.
