ಪಕ್ಷದ ನಡೆಸಿಕೊಲ್ಳುವ ರಿತಿಯಿಂದ ಆತ್ಮ ಗೌರವಕ್ಕೆ ಕುಂದುಂಟ್ಟಾಗಿದ್ದು, ಬದಲಾವಣೆ ಅನಿವಾರ್ಯವಾಗಿದೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗ (ಫೆ.16) : ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಪಕ್ಷವನ್ನು ಬಿಡುವ ಸೂಚನೆ ನೀಡಿದ್ದಾರೆ.

ಸೊರಬದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಕುಮಾರ್ ಬಂಗಾರಪ್ಪ ತಮ್ಮನ್ನು ಪಕ್ಷ ನಡೆಸಿ ಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್​​​​ ಬಿಡುವ ಸೂಚನೆ ನೀಡಿದ್ದಾರೆ.

ಪಕ್ಷದ ನಡೆಸಿಕೊಲ್ಳುವ ರಿತಿಯಿಂದ ಆತ್ಮ ಗೌರವಕ್ಕೆ ಕುಂದುಂಟ್ಟಾಗಿದ್ದು, ಬದಲಾವಣೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಮಾಜಿ ಸಚಿವರಾಗಿ ಪಕ್ಷಕ್ಕೆ ಹಲವಾರು ವರ್ಷಗಳಿಂದ ದುಡಿದಿದ್ದೇನೆ, ಕ್ಷೇತ್ರದ ಜನತೆ ಹಾಗೂ ಅಭಿಮಾನಿಗಳ ಇಚ್ಛೆಯಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆಯೆಂದು ಅವರು ಹೇಳಿದ್ದಾರೆ.