Asianet Suvarna News Asianet Suvarna News

ಕುಲಭೂಷಣ್ ಜಾಧವ್ ಜೀವಂತವಾಗಿದ್ದಾರೆ ಎಂದ ಬಸಿತ್

‘ಜಾಧವ್ ಜೀವಂತವಾಗಿದ್ದಾರೆ ಎಂದು ನಾನು ಭರವಸೆ ನೀಡಬಲ್ಲೆ’ ಎಂದು ಸುದ್ದಿವಾಹಿನಿಯೊಂದಕ್ಕೆ ಬಸಿತ್ ತಿಳಿಸಿದ್ದಾರೆ.

Kulbhushan Jadhav is alive
  • Facebook
  • Twitter
  • Whatsapp

ನವದೆಹಲಿ(ಮೇ.24): ಬೇಹುಗಾರಿಕೆ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಪಾಕಿಸ್ತಾನದಲ್ಲಿ ಸಾವನ್ನಪ್ಪಿರಬಹುದು ಎಂಬ ಭಾರತದ ಆತಂಕದ ಬೆನ್ನಲ್ಲೇ, ಕುಲಭೂಷಣ್ ಜಾಧವ್ ಜೀವಂತವಾಗಿದ್ದಾರೆ ಎಂದು ಭಾರತದಲ್ಲಿನ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್ ಹೇಳಿದ್ದಾರೆ.

‘ಜಾಧವ್ ಜೀವಂತವಾಗಿದ್ದಾರೆ ಎಂದು ನಾನು ಭರವಸೆ ನೀಡಬಲ್ಲೆ’ ಎಂದು ಸುದ್ದಿವಾಹಿನಿಯೊಂದಕ್ಕೆ ಬಸಿತ್ ತಿಳಿಸಿದ್ದಾರೆ.

ಇದೇ ವೇಳೆ ಜಾಧವ್ ತಾಯಿ ಕಳುಹಿಸಿಕೊಟ್ಟ ಮನವಿಯೊಂದನ್ನು ಭಾರತದ ಹೈ ಕಮಿಷನರ್ ಗೌತಮ್ ಬಂಬವಾಲೆ ಅವರು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗೆ ರವಾನಿಸಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ನ್ಯಾಯಾಲಯವು ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಡೆ ನೀಡಿದ್ದನ್ನು ಸ್ಮರಿಸಬಹುದು.

Follow Us:
Download App:
  • android
  • ios