Asianet Suvarna News Asianet Suvarna News

ಗಾಜಿನ ತಡೆಗೋಡೆ ಮಧ್ಯೆ ಪತ್ನಿ, ತಾಯಿಯನ್ನು ಭೇಟಿಯಾದ ಜಾಧವ್

ಇಸ್ಲಾಮಾಬಾದ್'ನಲ್ಲಿನ ಪಾಕ್ ವಿದೇಶಾಂಗ ಕಚೇರಿಯಲ್ಲಿ ಸೇನೆ,ಪೊಲೀಸ್, ಶಾರ್ಪ್ ಶೂಟರ್ಸ್'ಗಳ ಬಿಗಿಭದ್ರತೆ ನಡುವೆ ಪತ್ನಿ ಚೇತನ್'ಕುಲ್ ಹಾಗೂ ತಾಯಿ ಆವಂತಿ ಅವರು ಭೇಟಿ ಮಾಡಿದರು.

Kulbhushan Jadhav gets to meet his wife and mother

ನವದೆಹಲಿ(ಡಿ.25): ಕೊನೆಗೂ ಜಾಧವ್ ಜೀವನದಲ್ಲಿ ಒಂದಷ್ಟು ನಿಮಿಷ ಸಂತಸದ ಹೊನಲು ಹರಿಯಿತು. ಕ್ರಿಸ್'ಮಸ್ ವಿಶೇಷ ಪ್ರಯುಕ್ತ ಪತ್ನಿ ಹಾಗೂ ತಾಯಿಯನ್ನು ಪಾಕ್ ಜೈಲಿನಲ್ಲಿ ಬೇಹುಗಾರಿಕೆ ಆರೋಪದಲ್ಲಿ ಸೆರೆವಾಸ ಅನುಭವಿಸುತ್ತಿರುವ ಕುಲ್'ಭೂಷಣ್ ಜಾಧವ್ ಗಾಜಿನ ತಡೆಗೋಡೆ ಮಧ್ಯೆ ಭೇಟಿಯಾದರು.

ಪಾಕಿಸ್ತಾನದ ರಾಷ್ಟ್ರಪಿತ ಮೊಹಮ್ಮದ್ ಅಲಿ ಜಿನ್ನಾ ಅವರ ಹುಟ್ಟುಹಬ್ಬದ ಪ್ರಯುಕ್ತ ಪಾಕ್ ಸರ್ಕಾರ ಮಾನವೀಯತೆ ನೆಲೆ ಮೇಲೆ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರಿಗೆ ಭೇಟಿ ಮಾಡಲು ಅವಕಾಶ ಕಲ್ಪಿಸಿತ್ತು. ತಾಯಿ, ಪತ್ನಿಯನ್ನು ಭೇಟಿ ಮಾಡಿದ ಒಂದು ಕ್ಷಣ ಜಾಧವ್ ಕಣ್ಣು ತೇವವಾದವು. ಮೂವರ ನಡುವೆಯೂ ಒಂದಷ್ಟು ಹೊತ್ತು ಉಭಯಕುಶಲೋಪರಿ ನಡೆಯಿತು' ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಜಾಧವ್ ಬಂಧನದ 21 ತಿಂಗಳ ನಂತರ ಪಾಕಿಸ್ತಾನ ಸರ್ಕಾರ ಆತನ ಕುಟುಂಬಕ್ಕೆ ಭೇಟಿ ಮಾಡಲು ಅವಕಾಶ ನೀಡಿತ್ತು. ಇಸ್ಲಾಮಾಬಾದ್'ನಲ್ಲಿನ ಪಾಕ್ ವಿದೇಶಾಂಗ ಕಚೇರಿಯಲ್ಲಿ ಸೇನೆ,ಪೊಲೀಸ್, ಶಾರ್ಪ್ ಶೂಟರ್ಸ್'ಗಳ ಬಿಗಿಭದ್ರತೆ ನಡುವೆ ಪತ್ನಿ ಚೇತನ್'ಕುಲ್ ಹಾಗೂ ತಾಯಿ ಆವಂತಿ ಅವರು ಭೇಟಿ ಮಾಡಿದರು.

ಕುಲ್'ಭೂಷಣ್ ಜಾಧವ್ ಅವರನ್ನು ಕಳೆದ ವರ್ಷ ಮಾರ್ಚ್'ನಲ್ಲಿ ಬೇಹುಗಾರಿಕೆಯ ಆರೋಪದ ಮೇಲೆ ಅಪ್ಫಾನಿಸ್ತಾನ ಗಡಿಯಲ್ಲಿ ಪಾಕ್ ಸೇನೆ ಬಂಧಿಸಿ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಅಂತರರಾಷ್ಟ್ರೀಯ ನ್ಯಾಯಾಲಯದ ಮರಣ ದಂಡನೆಗೆ ತಡೆಯಾಜ್ಞೆ ನೀಡಿತ್ತು.

 

Follow Us:
Download App:
  • android
  • ios