ಮಾಜಿ ಯೋಧ ಕುಲಭೂಷಣ್ ಜಾಧವ್ ಗೆ ಗಲ್ಲುಶಿಕ್ಷೆ ವಿಧಿಸಿರುವುದನ್ನು ಖಂಡಿಸಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಿದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಗಮನದಲ್ಲಿರಲಿ ಎಂದು ಪಾಕ್ ಗೆ ಖಡಕ್ಕಾಗಿ ಹೇಳಿದ್ದಾರೆ.
ನವದೆಹಲಿ (ಏ.11): ಮಾಜಿ ಯೋಧ ಕುಲಭೂಷಣ್ ಜಾಧವ್ ಗೆ ಗಲ್ಲುಶಿಕ್ಷೆ ವಿಧಿಸಿರುವುದನ್ನು ಖಂಡಿಸಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಿದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಗಮನದಲ್ಲಿರಲಿ ಎಂದು ಪಾಕ್ ಗೆ ಖಡಕ್ಕಾಗಿ ಹೇಳಿದ್ದಾರೆ.
ಈ ಪ್ರಕರಣದ ವಿರುದ್ಧ ಜಾಧವ್ ಕಾನೂನಿನ ಹೋರಾಟ ನಡೆಸಲು ಸರ್ಕಾರ ಬೆಭಬಲ ನೀಡಲಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಕುಲಭೂಷಣ್ ಜಾಧವ್ ತಪ್ಪು ಮಾಡಿದ್ದಾರೆನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಜಾಧವ್ ಪಾಕ್ ಸುಪ್ರೀಂಕೋರ್ಟ್ ನಲ್ಲಿ ಹೋರಾಡಲು ಸರ್ಕಾರ ಬೆಂಬಲ ನೀಡಿ ಸುಮ್ಮನಾಗುವುದಿಲ್ಲ. ಅದರ ಜೊತಗೆ ಉತ್ತಮ ಕಾನೂನಿನ ನೆರವು ನೀಡುತ್ತೇವೆ. ಈ ಪ್ರಕರಣವನ್ನು ಬೇರೆ ಬೇರೆ ಹಂತಗಳಲ್ಲಿ ಸರ್ಕಾರ ತೆಗೆದುಕೊಳ್ಳಲಿದೆ. ವಿಶ್ವಸಂಸ್ಥೆಯಲ್ಲಿಯೂ ಸಹ ಈ ವಿಚಾರವನ್ನು ಎತ್ತಲಾಗುವುದು ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
