ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ‘ಫ್ಲೈ ಬಸ್’ ಟಿಕೆಟ್ ದರವನ್ನು ಕೆಎಸ್ಸಾರ್ಟಿಸಿ ಇಳಿಸಿದೆ.

ಬೆಂಗಳೂರು: ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ‘ಫ್ಲೈ ಬಸ್’ ಟಿಕೆಟ್ ದರವನ್ನು ಕೆಎಸ್ಸಾರ್ಟಿಸಿ ಇಳಿಸಿದೆ.

ಪ್ರಸ್ತುತ ಬೆಂಗಳೂರು- ಮೈಸೂರು ಪ್ರಯಾಣಕ್ಕೆ 850 ರು. ಟಿಕೆಟ್ ದರ ನಿಗದಿ ಮಾಡಲಾಗಿದೆ. ಇದೀಗ 3 ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಏಕಕಾಲಕ್ಕೆ ಟಿಕೆಟ್ ಬುಕ್ ಮಾಡಿ ದರೆ ಟಿಕೆಟ್ ದರ ತಲಾ 700 ರು. ನಿಗದಿಗೊಳಿಸಲಾಗಿದೆ.

ಈ ಗುಂಪು ಬುಕಿಂಗ್‌ನಿಂದ ತಲಾ ಟಿಕೆಟ್ ದರ 150 ರು. ಕಡಿಮೆಯಾಗಲಿದೆ. ಈ ಮಾರ್ಗ ದಲ್ಲಿ ಗುಂಪಾಗಿ ಪ್ರಯಾಣಿಸುವವರು ಆ್ಯಪ್ ಆಧಾರಿತ ಟ್ಯಾಕ್ಸಿಗಳತ್ತ ಹೊರಳುತ್ತಿರುವುದರಿಂದ ಫ್ಲೈ ಬಸ್‌ಗಳಿಗೆ ಉಂಟಾಗುತ್ತಿರುವ ನಷ್ಟ

ತಪ್ಪಿಸಲು ಕೆಎಸ್ಸಾರ್ಟಿಸಿ ಈ ನಿರ್ಧಾರ ಕೈಗೊಂಡಿದೆ. ಆ್ಯಪ್ ಆಧಾರಿತ ಟ್ಯಾಕ್ಸಿಗಳು ಬೆಂಗಳೂರು-ಮೈಸೂರಿಗೆ 2400 ರು. ಪಡೆಯುತ್ತಿವೆ.

ಇದೀಗ 3 ಮಂದಿ ಟಿಕೆಟ್ ಬುಕ್ ಮಾಡಿದರೆ ಫ್ಲೈ ಬಸ್ ನಲ್ಲಿ 2100 ರು. ಆಗಲಿದೆ. ಟ್ಯಾಕ್ಸಿಗಿಂತ ಫ್ಲೈ ಬಸ್ ಅಗ್ಗ ಆಗುವುದರಿಂದ ಗುಂಪು ಪ್ರಯಾಣಿಕರು ಫ್ಲೈ ಬಸ್‌ಗಳತ್ತ ಆಕರ್ಷಿತರಾಗುತ್ತಾರೆ ಎಂಬುದು ಕೆಎಸ್ಸಾರ್ಟಿಸಿ ಲೆಕ್ಕಾಚಾರ. ಹಾಲಿ ಫ್ಲೈ ಬಸ್‌ಗಳಲ್ಲಿ 2+2 ವಿನ್ಯಾಸ ಆಸನ ವ್ಯವಸ್ಥೆ ಇದೆ. ಕೆಲ ಪ್ರಯಾಣಿಕರು ಏಕ ಆಸನಕ್ಕಾಗಿ ದುಬಾರಿ ಟಿಕೆಟ್ ದರ ಭರಿಸಲು ಸಿದ್ಧರಿರುತ್ತಾರೆ. 2+1 ಆಸನ ವಿನ್ಯಾಸದ ಫ್ಲೈ ಬಸ್‌ಗಳನ್ನು ಸೇವೆಗೆ ನೀಡಲು ನಿರ್ಧರಿಸಲಾಗಿದೆ ಎಂದು ಕೆಎಸ್‌ಆರ್ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.