8 ಜನರ ಪ್ರಾಣ ಉಳಿಸಿದ ಕೆಎಸ್‌ಆರ್‌ಟಿಸಿ ಬಸ್

First Published 24, Jun 2018, 1:11 PM IST
KSRTC Bus Driver Save 8 People Life
Highlights

ಕೆಎಸ್‌ಆರ್‌ಟಿಸಿ ಬಸ್ ಒಂದು 8 ಜನರ ಪ್ರಾಣ ಉಳಿಸಿದ ಘಟನೆಯೊಂದು ಸುಬ್ರಮಣ್ಯದಲ್ಲಿ ನಡೆದಿದೆ. 8 ಮಂದಿ ತೆರಳುತ್ತಿದ್ದ ಕಾರ್ ಮೇಲೆ ಆನೆ ದಾಳಿ ಮಾಡಿದ್ದು, ಈ ವೇಳೆ ಬಸ್ ಹಾರ್ನ್ ಮಾಡುತ್ತಾ ಬಂದಿದ್ದರಿಂದ ಾನೆ ಸ್ಥಳದಿಂದ ಪರಾರಿಯಾಗಿದೆ. 

ಸುಬ್ರಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಿದ್ದ ಯಾತ್ರಾರ್ಥಿಗಳ ಓಮ್ನಿ ಕಾರಿನ ಮೇಲೆ ಬಿಳಿ ನೆಲೆಯ ಕಿದು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಯೊಂದು ದಾಳಿ ನಡೆಸಿದೆ. ಅದೃಷ್ಟವಶಾತ್ ಅದೇ ಸಮಯದಲ್ಲಿ ಬಸ್‌ವೊಂದು ಹಾರ್ನ್ ಮಾಡುತ್ತಾ ಬಂದಿದ್ದರಿಂದ ಕಾರಿ ನಲ್ಲಿದ್ದ 8 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಕುಡ್ಲೂರು ನಿವಾಸಿ ಗಿರೀಶ್ ಎಂಬುವರು ಕುಟುಂಬ ಸಮೇತರಾಗಿ ಧರ್ಮಸ್ಥಳದಲ್ಲಿ ದೇವರ ದರ್ಶನ ಮುಗಿಸಿಕೊಂಡು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. 

ಸುಬ್ರಹ್ಮಣ್ಯ ವಲಯಾರಣ್ಯ ವ್ಯಾಪ್ತಿಯ ಬಿಳಿನೆಲೆ ಸಮೀಪದ ಕಿದುವಿನಲ್ಲಿ ಕಾಡಾನೆಯೊಂದು ಹಠಾತ್ ಆಗಿ ರಾಜ್ಯ ಹೆದ್ದಾರಿಯ ಮಧ್ಯೆ ಬಂದಿದೆ. ಈ ವೇಳೆ ಗಿರೀಶ್ ಕಾರನ್ನು ರಸ್ತೆಯಲ್ಲೇ ನಿಲ್ಲಿಸಿದ್ದಾರೆ. ಆಗ ಏಕಾಏಕಿ ಕಾರಿನತ್ತ ಮುನ್ನುಗ್ಗಿ ಬಂದ ಕಾಡಾನೆ ಕಾರಿನ ಮುಂಭಾಗಕ್ಕೆ ಕಾಲು ಹಾಗೂ ಸೊಂಡಿಲಿನಿಂದ ಗುದ್ದಿ ಹಾನಿಗೊಳಿಸಿದೆ. 

ಕಾಡಾನೆ ದಾಳಿ ಮಾಡಿದಾಗ ಚಾಲಕ ಗಿರೀಶ್ ಸೇರಿದಂತೆ 8 ಮಂದಿ ಕಾರಿನೊಳಗೆ ಇದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಜೋರಾಗಿ ಹಾರ್ನ್ ಹಾಕುತ್ತಾ ಬಂದಿದೆ. ಬಸ್ ಹಾರ್ನ್‌ಗೆ ಗಾಬರಿಗೊಂಡ ಕಾಡಾನೆ ಕಾರನ್ನು ಬಿಟ್ಟು ಓಡಿ ಹೋಗಿದೆ. 

loader