ಬೀದರ್ (ಆ.೦3)‌: ಜಗತ್ತು ಕೊರೋನಾ ಮಹಾಮಾರಿಯಿಂದ ತತ್ತರಿಸಿರುವ ಮಧ್ಯೆ ಕೋವಿಡ್‌-19 ಹೆಮ್ಮಾರಿಯನ್ನು ಮೆಟ್ಟಿನಿಂತ ತಾಲೂಕಿನ ವಡಗಾಂವ್‌ ಗ್ರಾಮದ ಪೊಲೀಸ್‌ ಪೇದೆ ವೀರಭದ್ರಯ್ಯ ತಾನು ಗುಣಮುಖನಾದ ಮೇಲೆ ಪ್ಲಾಸ್ಮಾ ದಾನ ಮಾಡುವ ಮೂಲಕ ಇನ್ನಿತರರಿಗೂ ಮಾದರಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೆಎಸ್‌ಆರ್‌ಪಿ ಪೇದೆಯಾಗಿರುವ ವೀರಭದ್ರಯ್ಯ ತನ್ನ ಜೊತೆಗೆ ಇತರರೂ ಕೊರೋನಾದಿಂದ ಮುಕ್ತಿ ಪಡೆಯಲಿ ಎಂಬ ಒಳ್ಳೆ ಕಾರ‍್ಯದಿಂದ ತಮ್ಮ ಪ್ಲಾಸ್ಮಾ ದಾನ ಮಾಡಿ ಸ್ಫೂರ್ತಿಯಾಗಿದ್ದು, ಈ ಮಾನವೀಯ ಕಾರ್ಯಕ್ಕೆ ರಾಜ್ಯ ಪೊಲೀಸ್‌ ಮಹಾನಿರ್ದೆಶಕರೇ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.