ಈ ಪಕ್ಷದಲ್ಲಿ ರಾಜಕೀಯ ಜೀವನ ಆರಂಭವಾಗಿದೆ ಸಾಯೋತನಕ ಈ ಪಕ್ಷದಲ್ಲೇ ಇರುತ್ತೇನೆ

ಹಾವೇರಿ(ಅ.01): ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಸೆಡ್ಡು ಹೊಡೆದಿರುವ ಈಶ್ವರಪ್ಪನವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್​ ಸದ್ದು ಮಾಡಿದೆ. ಯಡಿಯೂರಪ್ಪನವರ ಶಕ್ತಿಕೇಂದ್ರ ಅಂತಲೇ ಕರೆಸಿಕೊಳ್ಳುವ ಹಾವೇರಿಯಲ್ಲಿ ಈಶ್ವರಪ್ಪನವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್​ನ ಬೃಹತ್​ ಸಮಾವೇಶ ಯಶಸ್ವಿಯಾಗಿದೆ. ನಗರದ ಮುನ್ಸಿಪಲ್​ ಮೈದಾನದಲ್ಲಿ ನಡೆದ ಈಶ್ವರಪ್ಪನವರ ರಾಯಣ್ಣ ಬ್ರಿಗೇಡ್​ನ ಬೃಹತ್​ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ ತಮ್ಮದೇ ಪಕ್ಷದ ನಾಯಕರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ತಮ್ಮದೇ ದಾಟಿಯಲ್ಲಿ ವಾಗ್ದಾಳಿ ನಡೆಸಿದರು.

ಇನ್ನೂ, ಈ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರುತ್ತೇನೆ. .ಈ ಪಕ್ಷದಲ್ಲಿ ರಾಜಕೀಯ ಜೀವನ ಆರಂಭವಾಗಿದೆ ಸಾಯೋತನಕ ಈ ಪಕ್ಷದಲ್ಲೇ ಇರುತ್ತೇನೆ ಅಂತ ಈಶ್ವರಪ್ಪ ತಮ್ಮ ಬೆಂಬಲಿಗರಿಗೆ ಮಾತು ಕೊಟ್ಟರು. ಮುಂದಿನ ಜನವರಿ 26ರಂದು ಕೂಡಲ ಸಂಗಮದಲ್ಲಿ ಸಮಾವೇಶ ನಡೆಸಿ ಲಕ್ಷಾಂತರ ಜನ ಸೇರಿಸುವ ಗುರಿ ಈಶ್ವರಪ್ಪನವರದ್ದಾಗಿದೆ. ಒಟ್ಟಾರೆ ಈಶ್ವರಪ್ಪನವರ ಹಾವೇರಿಯ ಸಂಗೊಳ್ಳಿ ರಾಯಣ್ಣ ಬ್ರಿಗೇಡ್​ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು ಲಭಿಸಿದೆ