ವರಿಷ್ಠರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಸೂಚಿಸಿದ್ದರು.ಪದಾಧಿಕಾರಿಗಳ ಬದಲಾವಣೆಗೆ ಒಂದು ಸಮಿತಿ ಕೂಡ ರಚಿಸಿದ್ದಾರೆ.ಆದರೆ ಆ ಸಮಿತಿ ಇದುವರೆಗೂ ಯಾವುದೇ ಸಭೆ ಮಾಡಿಲ್ಲ.ನಾವು ಎಲ್ಲ ನಾಯಕರ ಗಮನಕ್ಕೆ ತಂದಿದ್ದೇವೆ.ಆದರೂ ನಮ್ಮ ಬೇಡಿಕೆ ಈಡೇರಿಲ್ಲ.ಮತ್ತೆ ಯಾರಿಗೆ ಕೇಳಬೇಕು'

ಬೆಂಗಳೂರು(ಏ.27): ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸೋಕೆ ಯಾರು ಹೇಳಿಲ್ಲ.ಮುರುಳಿಧರ್ ರಾವ್ ಅವರಾಗಲಿ ಅಮಿತ್ ಶಾ ಆಗಲಿ ಹೇಳಿಲ್ಲ. ಯಡಿಯೂರಪ್ಪನವರು ಸುಳ್ಳು ಹೇಳುತ್ತಿದ್ದಾರೆ.ಬ್ರಿಗೇಡ್ ಬಗ್ಗೆ ಆಪಾದನೆ ಮಾಡುತ್ತಿರುವುದು ಒಳ್ಳೆಯದಲ್ಲ' ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಸುವರ್ಣ ನ್ಯೂಸ್ ಸ್ಟುಡಿಯೋ'ದಲ್ಲಿ ಮಾತನಾಡಿದ ಅವರು,ಇವತ್ತಿನ ಸಭೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆ ಆಗಿರಲಿಲ್ಲ.ಬಿಜೆಪಿ ಪಕ್ಷ ಉಳಿಸಲು ಸಂಘಟನೆ ಮಾಡುತ್ತಿದ್ದೇವೆ.ಜಿಲ್ಲಾ ಪದಾಧಿಕಾರಿಗಳ ಬದಲಾವಣೆಗೆ ಸೂಚನೆ ಕೊಟ್ಟಿದ್ದರು. ವರಿಷ್ಠರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಸೂಚಿಸಿದ್ದರು.ಪದಾಧಿಕಾರಿಗಳ ಬದಲಾವಣೆಗೆ ಒಂದು ಸಮಿತಿ ಕೂಡ ರಚಿಸಿದ್ದಾರೆ.ಆದರೆ ಆ ಸಮಿತಿ ಇದುವರೆಗೂ ಯಾವುದೇ ಸಭೆ ಮಾಡಿಲ್ಲ.ನಾವು ಎಲ್ಲ ನಾಯಕರ ಗಮನಕ್ಕೆ ತಂದಿದ್ದೇವೆ.ಆದರೂ ನಮ್ಮ ಬೇಡಿಕೆ ಈಡೇರಿಲ್ಲ.ಮತ್ತೆ ಯಾರಿಗೆ ಕೇಳಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂತೋಷ್​ ಅವರ ಬಗ್ಗೆ ಆರೋಪ ಮಾಡಿದ್ದು ನೋವು ತಂದಿದೆ.ಹೊಸಬರಿಗೆ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡುತ್ತಾರೆ. ಅವರು ಅಧಿಕಾರಿ ಪಡೆದು ಬೇರೆ ಪಕ್ಷಕ್ಕೆ ಹೋಗುತ್ತಾರೆ. ಮೊದಲಿನಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಏನಾಗಬೇಕು ಎಂದು ಪ್ರಶ್ನಿಸಿದ ಅವರು, ಸಂಬಂಧ ಇಲ್ಲದವರೆಲ್ಲಾ ಪಕ್ಷದಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಇದರಿಂದ ಬಿಜೆಪಿಯ ಮೂಲ ಕಾರ್ಯಕರ್ತರಿಗೆ ನೋವಾಗಿದೆ' ಎಂದು ತಮ್ಮ ಅಳಲನ್ನು ತೋಡಿಕೊಂಡರು.