ಇಂದು ಮಧ್ಯಾಹ್ನ 3 ಗಂಟೆಗೆ  ಕಾರಿನಲ್ಲಿ ವಿನಯ್ ಅವರ ಮನೆಯ ಮುಂದೆ ಬಂದ ಐದಾರು ದುಷ್ಕರ್ಮಿಗಳು ವಿನಯ್ ಅವರನ್ನು ಎಳೆದು ಕಾರಿನಲ್ಲಿ ಕರೆದೊಯ್ಯಲು ಯತ್ನಿಸಿದ್ದಾರೆ.

ಬೆಂಗಳೂರು(ಮೇ.11): ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ಪಿ'ಆರ್'ಒ ವಿನಯ್' ಅವರನ್ನು ಅಪಹರಣಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ನಡೆದಿದೆ.

ಇಂದು ಮಧ್ಯಾಹ್ನ 3 ಗಂಟೆಗೆ ಕಾರಿನಲ್ಲಿ ವಿನಯ್ ಅವರ ಮನೆಯ ಮುಂದೆ ಬಂದ ಐದಾರು ದುಷ್ಕರ್ಮಿಗಳು ವಿನಯ್ ಅವರನ್ನು ಎಳೆದು ಕಾರಿನಲ್ಲಿ ಕರೆದೊಯ್ಯಲು ಯತ್ನಿಸಿದ್ದಾರೆ. ವಿನಯ್ ಕಿರುಚಾಡಿದ ಕಾರಣ ತಕ್ಷಣ ಸ್ಥಳೀಯರು ಆಗಮಿಸಿದ್ದಾರೆ. ಸಾರ್ವಜನಿಕರನ್ನು ಕಂಡ ಅಪಹರಣಕಾರರು ಬಂದ ಕಾರಿನಲ್ಲಿಯೇ ಪರಾರಿಯಾಗಿದ್ದಾರೆ. ಎಳದಾಡಿದ ಸಂದರ್ಭದಲ್ಲಿ ವಿನಯ್ ಅವರ ಕೈ ಮೂಳೆ ಮುರಿದಿದ್ದು, ಯಶವಂತಪುರದ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಹಾಲಕ್ಷ್ಮಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.