ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತವರ ಕುಟುಂಬ ಹಾಗೂ ವಿಪಕ್ಷ ನಾಯಕ ಈಶ್ವರಪ್ಪ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ಇದ್ದ ಅಕ್ರಮ ಆಸ್ತಿ ಸಂಪಾದನೆಯ ಪ್ರಕರಣಗಳನ್ನು ಶಿವಮೊಗ್ಗ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಜಾಗೊಳಿಸಿ ಆದೇಶ ನೀಡಿದೆ. ಇನ್ನೊಂದೆಡೆ ಬ್ರಿಗೇಡ್ ವಿಷಯದಲ್ಲಿ ಮುನಿಸಿಕೊಂಡಿದ್ದ ಇಬ್ಬರೂ ನಾಯಕರು ರಹಸ್ಯ ಮಾತುಕತೆ ನಡೆಸಿ ಒಂದಾಗಿದ್ದಾರೆ ಎನ್ನಲಾಗ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಈಶ್ವರಪ್ಪ ಕಲಹ ಮರೆತು ಒಂದಾಗುವ ಮುನ್ಸೂಚನೆ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟುವ ಮೂಲಕ ಬಿಎಸ್​ವೈಗೆ ಸಡ್ಡು ಹೊಡೆದಿದ್ದ ಈಶ್ವರಪ್ಪ ಯಾವುದೇ ಕಾರಣಕ್ಕೂ ಒಂದಾಗುವುದೇ ಇಲ್ಲವೇನೋ ಎಂಬಂತ ವಾತಾವರಣ ಬಿಜೆಪಿ ಪಕ್ಷದಲ್ಲಿ ಮನೆ ಮಾಡಿತ್ತು.

ಇನ್ನೂ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಬಿಎಸ್​ವೈ ಮತ್ತವರ ಕುಟುಂಬ ವಿರುದ್ಧದ ಪ್ರಕರಣವನ್ನು ಲೋಕಾಯುಕ್ತ ಕೋರ್ಟ್​ ವಜಾಗೊಳಿಸಿ ಬಿಗ್ ರಿಲೀಫ್ ನೀಡಿದೆ. ಶಿವಮೊಗ್ಗ ಲೋಕಾಯುಕ್ತ ವಿಶೇಷ ಕೋರ್ಟ್​ನಲ್ಲಿ ವಕೀಲ ಬಿ.ವಿನೋದ್ ಈ ಬಗ್ಗೆ ಕೇಸ್ ದಾಖಲಿಸಿದ್ದರು. ಆದಾಯದ ಮೂಲದ ಕುರಿತು ಯಾವುದೇ ಆಧಾರವಿಲ್ಲದ್ದಕ್ಕೆ ಕೋರ್ಟ್​ ಕೇಸ್ ವಜಾ ಮಾಡಿದೆ. ಅಲ್ದೇ ವಿಪಕ್ಷ ನಾಯಕ ಈಶ್ವರಪ್ಪ ಮತ್ತವರ ಕುಟುಂಬದ ವಿರುದ್ಧ ವಕೀಲ ವಿನೋದ್ ದಾಖಲಿಸಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನೂ ಲೋಕಾ ನ್ಯಾಯಾಲಯ ವಜಾಗೊಳಿಸಿದೆ.

ಒಟ್ಟಿನಲ್ಲಿ ಇಬ್ಬರು ನಾಯಕರು ಮುನಿಸು ಮರೆತು ಒಂದಾಗುವ ಮುನ್ಸೂಚನೆ ನೀಡಿದ್ದಾರೆ. ಈ ಮೂಲ್ಕ ಬಿಜೆಪಿಯನ್ನು ಮತ್ತಷ್ಟು ಬಲಿಷ್ಠಗೊಳಿಸಿ ಅಧಿಕಾರದ ಗದ್ದುಗೇರಲು ತಯಾರಿ ನಡೆಸುವ ರಾಜಕೀಯ ಇರಾದೆ ಇದಾಗಿದೆ.