ಬೆಂಗಳೂರು[ಸೆ.19]: ಕಾಂಗ್ರೆಸ್‌ ನಾಯಕರ ಬಗ್ಗೆ ತುಚ್ಛವಾದ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಸಂಸ್ಕೃತಿಯೇ ಇಲ್ಲದ ಮನುಷ್ಯ. ಸಾರ್ವಜನಿಕ ಬದುಕಿನಲ್ಲಿರಲು ಅವ ನಾಲಾಯಕ್‌ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಿದ್ದು ದಡ್ಡ, ಅವರಿಗೆ ತಲೆ ಸರಿ ಇಲ್ಲ: ಈಶ್ವರಪ್ಪ

ಕಾಂಗ್ರೆಸ್‌ನವರು ಹಿಜಡಾಗಳು ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಈಶ್ವರಪ್ಪನಿಗೆ ಸಂಸ್ಕೃತಿಯೇ ಇಲ್ಲ. ಸಾರ್ವಜನಿಕ ಬದುಕಿನಲ್ಲಿರಲು ಆವಯ್ಯ ನಾಲಾಯಕ್‌. ಲಕ್ಷಾಂತರ ಜನ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ಎನ್ನುವ ಅರಿವೇ ಈಶ್ವರಪ್ಪನಿಗೆ ಇಲ್ಲ. ಹಾಗಾಗಿಯೇ ಹೀಗೆಲ್ಲಾ ಮಾತನಾಡುತ್ತಾರೆ. ಈಶ್ವರಪ್ಪ ಒಬ್ಬ ಜವಾಬ್ದಾರಿ ಮಂತ್ರಿಯಾಗಿ ಮಾತನಾಡಬೇಕು. ಬಿಜೆಪಿಗೆ ಮತಹಾಕದ ಅಲ್ಪಸಂಖ್ಯಾತರು ದೇಶಪ್ರೇಮಿಗಳಲ್ಲ ಎಂದರೆ ಏನರ್ಥ. ಇದನ್ನು ಖಂಡಿಸುತ್ತೇನೆ ಎಂದರು.

ಸಿದ್ದು ಕಾಲ್ಗುಣದಿಂದ ಕಾಂಗ್ರೆಸ್‌ ನಿರ್ನಾಮ: ಈಶ್ವರಪ್ಪ ಕಿಡಿ

ಇನ್ನಾದರೂ ಅವರು ಸಂಸದೀಯ ಭಾಷೆ ಬಳಸಿ ಜವಾಬ್ದಾರಿಯಿಂದ ಮಾತನಾಡಬೇಕು. ಕೆಟ್ಟಭಾಷೆ ಬಳಸಲು ಎಲ್ಲರಿಗೂ ಬರುತ್ತದೆ ಎಂಬ ಅವರಿಗೆ ಇರಬೇಕು ಎಂದರು.

ಹಿಜಡಾಗಳೇ ಶಕ್ತಿ ತೋರಿಸಲಿ:

ಮಾಜಿ ಸಚಿವ ಯು.ಪಿ.ಖಾದರ್‌ ಮಾತನಾಡಿ, ಈಶ್ವರಪ್ಪ ಅಲ್ಪಸಂಖ್ಯಾತರನ್ನು ಬಯ್ಯೋದೇ ದೇಶಭಕ್ತಿ ಎಂದುಕೊಂಡಿದ್ದಾರೆ. ಇದು ಬಹಳ ದಿನ ನಡೆಯಲ್ಲ. ಇದಕ್ಕೆ ಕಾಲವೇ ಉತ್ತರಿಸಲಿದೆ. ಈಶ್ವರಪ್ಪ ಉಪಮುಖ್ಯಮಂತ್ರಿ ಸ್ಥಾನ ಸಿಗದಿದ್ದಕ್ಕೆ ತಮ್ಮ ಪಕ್ಷದವರ ಮೇಲೆ ತೋರಿಸಲಾಗದ ಕೋಪವನ್ನು ಈ ರೀತಿ ಹೇಳಿಕೆಗಳ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನವರನ್ನು ಹಿಜಡಾಗಳು ಎಂದಿದ್ದಾರೆ. ಹಿಜಡಾಗಳ ಶಕ್ತಿ ಏನು ಅನ್ನೋದನ್ನು ಹಿಜಡಾ ಸಂಘಟನೆಗಳೇ ಈಶ್ವರಪ್ಪಗೆ ತೋರಿಸಲಿ ಎಂದರು.