ಮಂಡ್ಯ :  ಕೃಷ್ಣರಾಜಸಾಗರ ಜಲಾಶಯದ ಬಳಿ ಅಮೆರಿಕದ  ಪ್ರಸಿದ್ಧ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಆಕರ್ಷಕ ಪ್ರವಾಸಿ ಕಲ್ಯಾಣ ನಿರ್ಮಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಯೋಜನೆಯ ನೀಲನಕ್ಷೆಯನ್ನು ಪ್ರಕಟಿಸಿದೆ. ದೇಶದಲ್ಲೇ ಮೊದಲ ಪೆಂಗ್ವಿನ್ ಮೃಗಾಲಯ, ಉದ್ಯಾನ ಸುತ್ತಾಡಲು ಟ್ರಾವಲ್, ಹೊಸ ಅನುಭವ ನೀಡುವ ವಾಟರ್ ಪ್ಲೇಟ್, ಮೈನವಿರೇಳಿಸುವ ವಾಟರ್ ಸ್ಪೋರ್ಟ್ಸ್ ಮುಂತಾದವು ಇಲ್ಲಿರಲಿವೆ.

336 ಎಕರೆ ಜಾಗವನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಇದನ್ನು ದೇಶದಲ್ಲಿಯೇ ಆಕರ್ಷಕ ಪ್ರವಾಸಿ ತಾಣವಾಗಿಸಲು ಯೋಜನೆ ರೂಪಿಸಲಾಗಿದೆ. ಯೋಜನೆ ಜಾರಿಯಿಂದ ನೇರ ಹಾಗೂ ಪರೋಕ್ಷವಾಗಿ ಸಡುತ್ತಲಿನ ಗ್ರಾಮಗಳ 17 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಹಾಗೂ ಸರ್ಕಾರಕ್ಕೆ ವರ್ಷಕ್ಕೆ 30 ಕೋಟಿ ರು.ಗಳಿಗೂ ಅಧಿಕ ಆದಾಯದ ಅಂದಾಜು ಮಾಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾ ತಿಳಿಸಿದ್ದಾರೆ.

ಕೃಷ್ಣರಾಜಸಾಗರ (ಕೆಆಎ) ಆವರಣದಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳವನ್ನು ಶನಿವಾರ ಪರಿಶೀಲನೆ ನಡೆಸಿ, ಇಲಾಖೆ ಅಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾ ಮಾತನಾಡಿದರು. ಯೋಜನೆಯಲ್ಲಿ ಬೃಂದಾವನ ಹಾಗೂ ಅ‰ಣೆಕಟ್ಟೆಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ದೇಶ ಹಾಗೂ ರಾಜ್ಯದ ಇತಿಹಾಸ, ಸಂಸ್ಕೃತಿ ಧರ್ಮವನ್ನು ಬಿಂಬಿಸುವ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ.

ಹೊಸ ಯುಗದಲ್ಲಿ ಪ್ರವಾಸಿ ಕೇಂದ್ರವಾಗಿ ಎಲ್ಲ ವರ್ಗದ ಜನರು ಇಷ್ಟಪಡುವ ರೀತಿಯಲ್ಲಿ ಈ ಸ್ಥಳವನ್ನು ಅಭಿವೃದಿಟಛಿಪಡಿಸುವ ಯೋಜನೆ ಇದಾಗಿದೆ. ಪ್ರತಿದಿನ ಕನಿಷ್ಠ 10ರಿಂದ 15 ಸಾವಿರ ಮಂದಿ ಭೇಟಿ ನೀಡಬೇಕು. ಪ್ರವಾಸಿಗರು ಕನಿಷ್ಠ ಎರಡು ದಿನ ಇಲ್ಲೇ ಉಳಿಯುವ ಹಾಗೆ ಮೈಸೂರು, ಮಂಡ್ಯ, ಕೂರ್, ಬಂಡೀಪುರ, ರಂಗನತಿಟ್ಟು ತಾಣಗಳಿಗೆ ಭೇಟಿ ನೀಡುವುದಕ್ಕಾಗಿ ಪ್ಯಾಕೇ ಆರಂಭಿಸಲಾಗುವುದು
ಎಂದು ಹೇಳಿದರು.

ರಾಜಸ್ಥಾನ, ಪಂಜಾ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿರುವ ಹಿರಿಯ ವಾಸ್ತುಶಿಲ್ಪಿಗೆ ಯೋಜನಾ ವರದಿ ರೂಪಿಸಲು ಸೂಚಿಸಲಾಗಿದೆ. ಖಾಸಗಿ ಸಾರ್ವಜನಿಕ ಸಹಭಾಗ್ಕೃ್ವಿದಲ್ಲಿ ಯೋಜನೆ ಸಿದ್ಧವಾಗಲಿದೆ. ಸರ್ಕಾರದಿಂದ ಬಿಡಿಗಾಸು ಕೂಡ ಖರ್ಚು ಮಾಡುವುದಿಲ್ಲ. ತಿಂಗಳೊಳಗೆ ಜಾಗತಿಕ ಟೆಂಡರ್ ನೀಡಲಾಗುತ್ತದೆ. ಅಂದಾಜು 1400 ರಿಂದ 1500 ಕೋಟಿ ರು. ವೆಚ್ಚವಾಗಬಹುದು ಎಂದು
ನಿರೀಕ್ಷಿಸಲಾಗಿದೆ. ಮುಂದಿನ ಎರಡೂವರೆ ವರ್ಷದಲ್ಲಿ ದೇಶದ ಅತಿ ಶ್ರೇಷ್ಠ ಪ್ರವಾಸಿ ತಾನ ಇಲ್ಲಿ ನಿರ್ಮಾಣವಾಗಲಿದೆ. ಕಾವೇರಿ ನೀರಾವರಿ ನಿಗಮ ಯೋಜನೆಯ ಮಾಲಿಕತ್ವ ಹೊಂದಿರುತ್ತದೆ ಎಂದು ತಿಳಿಸಿದರು.

ಯಾರಿಗೂ ಆತಂಕ ಬೇಡ: ಯೋಜನೆಗಾಗಿ 336 ಎಕರೆ ಸರ್ಕಾರಿ ಜಮೀನು ಇದೆ. ಇದರ ಜತೆಗೆ ಕೆಆಆರ್ ಎಸ್ ಪಕ್ಕದಲ್ಲಿರುವ ಬರಡು ಭೂಮಿಯನ್ನು ಬಳಸಿಕೊಳ್ಳಲಾಗುವುದು. ಇದರಿಂದ ಯಾವೊಬ್ಬ ರೈತರು ಕೂಡ ಆತಂಕ ಪಡುವ ಅಗತ್ಯವಿಲ್ಲ. 74 ಎಕರೆ ಪ್ರದೇಶದಲ್ಲಿರುವ ಬೃಂದಾವನವನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ. ಬೃಂದಾವನದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಕೂಡ ಆತಂಕ ಪಡಬೇಕಿಲ್ಲ ಎಂದು ಹೇಳಿದರು. 

ಹೊಸ ಚಟುವಟಿಕೆಗಳು ಪೂರ್ಣಗೊಂಡ ನಂತರ ಎರಡು ಸಾವಿರ ಜನರಿಗೆ ನೇರ ಉದ್ಯೋಗ ಹಾಗೂ 15 ಸಾವಿರ ಜನರಿಗೆ ಪರೋಕ್ಷ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.

ವರದಿ : ಶಿವಮಾದು