ಸಾಧು ಮನುಷ್ಯ ಕೃಷ್ಣಬೈರೇಗೌಡ ಸಿಟ್ಟಾಗಿದ್ದು ಏಕೆ: ಲೇಹರ್ ಸಿಂಗ್ ಹೇಳಿದ ಮಾತು ಯಾವುದು

First Published 20, Feb 2018, 7:57 PM IST
Krisnhabairegowda Speak about lehar Singh
Highlights

ಕೃಷ್ಣ ಬೈರೇಗೌಡರಂತೂ ವ್ಯಾಘ್ರರಾಗಿ' ಜೈಲಿಗೆ ಹೋದವರನ್ನ ರಾಜ್ಯಾಧ್ಯಕ್ಷ ಮಾಡಿದ್ದೀರಾ. ನೀವು ನಮ್ಮ ಬಗ್ಗೆ ಮಾತಾಡಬೇಡಿ' ಎಂದಾಗ ಸಭಾಪತಿ ಮರಿತಿಬ್ಬೇಗೌಡ ಮಧ್ಯಪ್ರವೇಶಿಸಿ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ಪದ ತೆಗಿಸಿದರು.

ಬೆಂಗಳೂರು(ಫೆ.20): ಸದಾ ಹಸನ್ಮುಖಿಯಾಗಿ ಸಾಧು ವ್ಯಕ್ತಿತ್ವದಿಂದ ಇರುವ ಕೃಷಿ ಸಚಿವ ಕೃಷ್ಣ ಬೈರೇಗೌಡ ಇಂದಿನ ಕಲಾಪದಲ್ಲಿ ವ್ಯಾಘ್ರರಾದರು. ಅವರ ಕೋಪಕ್ಕೆ ಕಾರಣವಾಗಿದ್ದು ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಒಂದು ಮಾತು ಕಾರಣವಾಯಿತು.

ವಿಧಾನ ಪರಿಷತ್'ನಲ್ಲಿ ಚರ್ಚೆ ನಡೆಯುತ್ತಿದ್ದಾಗ ಪರಿಷತ್ ಸದಸ್ಯ ಲೆಹರ್ ಸಿಂಗ್ ಮಾತನಾಡುತ್ತಾ 'ರಾಹುಲ್ ಗಾಂಧಿ ಬೇಲ್ ಮೇಲೆ ಹೊರಗಿದ್ದಾರೆ. ಏನಾದ್ರು ಹೆಚ್ಚು ಕಡಿಮೆ ಆದರೆ ಪಕ್ಷಕ್ಕೆ ಸಮಸ್ಯೆ ಆಗುತ್ತೆ. ರಾಹುಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಕೃಷ್ಣಬೈರೇಗೌಡರನ್ನು ಆ ಪದವಿಯಲ್ಲಿ ಕೂರಿಸಿ ಎಂದು ಸಲಹೆ ನೀಡಿದರು.

ಇದರಿಂದ ಕಾಂಗ್ರೆಸ್ ಸದಸ್ಯರೆಲ್ಲರೂ ಸಿಟ್ಟಾದರು. ಕೃಷ್ಣ ಬೈರೇಗೌಡರಂತೂ ವ್ಯಾಘ್ರರಾಗಿ' ಜೈಲಿಗೆ ಹೋದವರನ್ನ ರಾಜ್ಯಾಧ್ಯಕ್ಷ ಮಾಡಿದ್ದೀರಾ. ನೀವು ನಮ್ಮ ಬಗ್ಗೆ ಮಾತಾಡಬೇಡಿ' ಎಂದಾಗ ಸಭಾಪತಿ ಮರಿತಿಬ್ಬೇಗೌಡ ಮಧ್ಯಪ್ರವೇಶಿಸಿ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ಪದ ತೆಗಿಸಿದರು. ನಂತರ ರಾಜ್ಯಪಾಲರ ಭಾಷಣದ ಮೇಲೆ ಲೆಹರ್ ಸಿಂಗ್ ಚರ್ಚೆ ಮುಂದುವರಿಸಿದರು.

loader