ವಿಮರ್ಶಕ ನಾಮವರ್ ಸಿಂಗ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಸೋಬ್ತಿ ಅವರು ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಆಧರಿಸಿ 53ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ನವದೆಹಲಿ(ನ.03): ಪ್ರಖ್ಯಾತ ಹಿಂದಿ ಲೇಖಕಿ ಕೃಷ್ಣ ಸೋಬ್ತಿ ಅವರನ್ನು 2017ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಮರ್ಶಕ ನಾಮವರ್ ಸಿಂಗ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಸೋಬ್ತಿ ಅವರು ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಆಧರಿಸಿ 53ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಿದೆ. 92 ವರ್ಷದ ಕೃಷ್ಣ ಸೋಬ್ತಿ ಅವರು ಹಿಂದಿ ಸಾಹಿತ್ಯದ ಹೆಸರಾಂತ ಲೇಖಕಿಯಾಗಿದ್ದು ಹಲವಾರು ಕಾದಂಬರಿ, ಸಣ್ಣಕಥೆಗಳನ್ನು ರಚಿಸಿದ್ದಾರೆ. ಇವರ ಕೆಲವು ಕೃತಿಗಳು ಇಂಗ್ಲಿಷಿಗೂ ಭಾಷಾಂತರವಾಗಿದೆ. ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಸೋಬ್ತಿ ಅವರಿಗೆ ಸಂದಿವೆ.