ವಿಶ್ವನಾಥ್ ಕರೆದಿದ್ದ ಸಭೆಯಲ್ಲಿ ರವಿಶಂಕರ್ ಪಾಲ್ಗೊಂಡು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ವಿರುದ್ದ ವಾಗ್ದಾಳಿ ನಡೆಸಿದ್ದರು.
ಬೆಂಗಳೂರು(ಮಾ.24): ಮಾಜಿ ಸಂಸದ ಎಚ್. ವಿಶ್ವನಾಥ್ ಪರ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್. ರವಿಶಂಕರ್ ಅವರ ತಲೆದಂಡವಾಗಿದೆ.
ವಿಶ್ವನಾಥ್ ಕರೆದಿದ್ದ ಸಭೆಯಲ್ಲಿ ರವಿಶಂಕರ್ ಪಾಲ್ಗೊಂಡು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಈ ಕಾರಣದಿಂದ ನಗರಾಧ್ಯಕ್ಷ ಸ್ಥಾನದಿಂದ ಟಿ.ಎಸ್. ರವಿಶಂಕರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಆರ್.ಮೂರ್ತಿ ಅವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಆದೇಶ ಹೊರಡಿಸಿದ್ದಾರೆ.
