ಬೆಂಗಳೂರು[ಜ.04]   ರೈತರ ಸಾಲಮನ್ನಾವನ್ನು ಪ್ರಧಾನಿ ಲಾಲಿ ಪಾಪ್ ಅಂತಾರೆ. ನಾವು ತಕ್ಕಮಟ್ಟಿಗಾದರೂ ರೈತರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ. ಆದ್ರೆ ಪ್ರಧಾನಿ ಮೋದಿಯವರು ಏನು ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.

ರೈತಪರ ನಾವು ಇದ್ದೇವೆ ಅನ್ನೋ ವಿಶ್ವಾಸವನ್ನೂ ಮೂಡಿಸಲಿಲ್ಲ. ರಾಹುಲ್ ಗಾಂಧಿ ಬುಟಾಟಿಕೆಯ ಮಾತುಗಳನ್ನಾಡುತ್ತಿಲ್ಲ. ಹೇಳಿದಂತೆ ರಜಸ್ಥಾನ, ಛತ್ತೀಸಗಡ್, ಮಧ್ಯಪ್ರದೇಶದಲ್ಲಿ ಸಾಲಮನ್ನಾ ಮಾಡಿದ್ದೇವೆ. ರಾಹುಲ್ ಗಾಂಧಿಯವರ ಕಳಕಳಿ ಏನು ? ಪ್ರಧಾನಿ ಮೋದಿಯವರ ಕಳಕಳಿ ಏನು? ಎಂದು ಕೇಳಿದ್ದಾರೆ.

ಮೋದಿಗೆ ಮತ ಹಾಕಬೇಡಿ ಎಂದ ಮೋದಿ ಪತ್ನಿ ಜಶೋದಾಬೆನ್‌?

ಮೋದಿ ಸುಳ್ಳುಗಾರ. ವಿಕೃತ ಸಂತೋಷ ಪಡುವ ವ್ಯಕ್ತಿ. ನೀವು ಒಮ್ಮೆ ಕರ್ನಾಟಕಕ್ಕೆ ಬನ್ನಿ ನಮ್ಮ ಸಿಎಂ, ಡಿಸಿಎಂ ಸಮಂಜಸವಾದ ಮಾಹಿತಿಯನ್ನ ನಿಮಗೆ ನೀಡಲಿದ್ದಾರೆ. ಕನಿಷ್ಠ 2 ಗಂಟೆಯಾದರೂ ರಾಜ್ಯಕ್ಕೆ ಬನ್ನಿ ಎಲ್ಲ ವಿವರ ನೀಡುತ್ತೇವೆ ಎಂದು ಸವಾಲು ಹಾಕಿದ್ದಾರೆ.