ರಾಜ್ಯಕ್ಕೆ ಪ್ರಧಾನಿ ಮೋದಿ ಬರುತ್ತಾರೆ ಅನ್ನುವ ಸುದ್ದಿ ಕಾಂಗ್ರೆಸ್'ನಲ್ಲಿ ನಡುಕ ಉಂಟು ಮಾಡಿದೆ.

ಬೆಂಗಳೂರು (ಜ.03): ರಾಜ್ಯಕ್ಕೆ ಪ್ರಧಾನಿ ಮೋದಿ ಬರುತ್ತಾರೆ ಅನ್ನುವ ಸುದ್ದಿ ಕಾಂಗ್ರೆಸ್'ನಲ್ಲಿ ನಡುಕ ಉಂಟು ಮಾಡಿದೆ.

ಪ್ರಧಾನಿ ರಾಜ್ಯಕ್ಕೆ ಬಂದ್ರೆ ರಾಹುಲ್ ಕೂಡ ನಡುಗುತ್ತಾರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ಜನೆವರಿ ಕೊ‌ನೆಯ ವಾರದಲ್ಲಿ ರಾಜ್ಯಕ್ಕೆ ಭೇಟಿ ನೀಡಲು ಸಮಯ ನಿಗದಿಯಾಗಿತ್ತು. ಆದ್ರೆ ಇದೀಗ ಪ್ರಧಾನಿ ಮೋದಿ ಜನವರಿ 28 ರಂದು ಬೆಂಗಳೂರಲ್ಲಿ ನಡೆಯುವ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ಕಾಂಗ್ರೆಸ್ ಇದೀಗ ಅದೇ ಸಮಯದಲ್ಲಿ ರಾಜ್ಯಕ್ಕೆ ಭೇಟಿ ನೀಡಬೇಕಿದ್ದ ರಾಹುಲ್ ಗಾಂಧಿ ಕಾರ್ಯಕ್ರಮವನ್ನು ಫೆಬ್ರುವರಿ ಮೊದಲ ವಾರಕ್ಕೆ ಮುಂದೂಡಿದೆ.

ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ರಾಜ್ಯಕ್ಕೆ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯನ್ನು ಅವಿಸ್ಮರಣೀಯಗೊಳಿಸಬೇಕು ಎನ್ನುವುದು ಕೆಪಿಸಿಸಿ ಚಿಂತನೆಯಾಗಿತ್ತು. ಆದರೆ ಅದೇ ಸಮಯಕ್ಕೆ ಮೋದಿ ಬಂದರೆ ರಾಹುಲ್ ಭೇಟಿ ಕಾರ್ಯಕ್ರಮ ಸದ್ದು ಮಾಡಲ್ಲ. ಬದಲಿಗೆ ಠುಸ್ಸಾಗುತ್ತೆ ಅನ್ನೋ ಭೀತಿ ರಾಹುಲ್ ಜೊತೆಗೆ ರಾಜ್ಯ ಕೈ ನಾಯಕರನ್ನೂ ಕಾಡ್ತಿದೆ. ಹಾಗಾಗಿ ಮೊದಲು ಮೋದಿ ಬಂದು ಹೋಗಲಿ. ಆಮೇಲೆ ರಾಹುಲ್ ಗಾಂಧಿ ಕಾರ್ಯಕ್ರಮವನ್ನ ಫಿಕ್ಸ್ ಮಾಡೋಣ ಅನ್ಬೋ ತೀರ್ಮಾನಕ್ಕೆ ಕೆಪಿಸಿಸಿ ಬಂದಿದೆ. ಇದಕ್ಕಾಗಿಯೇ ಎಐಸಿಸಿ ಮಾಧ್ಯಮ ಮುಖಂಡರುಗಳು ಕೆಪಿಸಿಸಿ ಮಾಧ್ಯಮದವರೊಂದಿಗೆ ಸಭೆ ನಡೆಸಲು ಜನೆವರಿ ೮ ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅಂದೇ ರಾಹುಲ್ ರಾಜ್ಯ ಭೇಟಿ ಬಗ್ಗೆ ನಿರ್ಧಾರವಾಗಲಿದೆ ಎನ್ನಲಾಗಿದೆ.