ಬಿಹಾರದ ಮುಜಫ್ಫರ್‌ಪುರದ ಮನೋಜ್‌ 2014ರಲ್ಲಿ ರಿಂಕಿಯನ್ನು ವಿವಾಹವಾಗಿದ್ದ. 2015ರಲ್ಲಿ ರಿಂಕಿ ಕಾಣೆಯಾಗಿದ್ದಳು.

ಪ್ರತ್ಯಕ್ಷ ಕಂಡರೂ, ಪ್ರಮಾಣಿಸಿ ನೋಡು ಎನ್ನುತ್ತಾರೆ ಹಿರಿಯರು. ಯಾಕೆಂದರೆ, ಇಲ್ಲೊಂದು ಪ್ರಕರಣದಲ್ಲಿ ವರದಕ್ಷಿಣೆ ಸಾವಿಗೆ ಸಂಬಂಧಿಸಿದಂತೆ ಗಂಡ 2 ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆದರೆ ಪತ್ನಿ ತನ್ನ ಪ್ರಿಯಕರನೊಂದಿಗೆ ದೂರದ ಊರಲ್ಲಿ ಆರಾಮವಾಗಿದ್ದಾಳೆ. ಬಿಹಾರದ ಮುಜಫ್ಫರ್‌ಪುರದ ಮನೋಜ್‌ 2014ರಲ್ಲಿ ರಿಂಕಿಯನ್ನು ವಿವಾಹವಾಗಿದ್ದ. 2015ರಲ್ಲಿ ರಿಂಕಿ ಕಾಣೆಯಾಗಿದ್ದಳು. ವರದಕ್ಷಿಣೆಗಾಗಿ ಮಗಳನ್ನು ಹತ್ಯೆ ಮಾಡಿದ್ದಾರೆಂದು ರಿಂಕಿ ಮನೆಯವರು ದೂರು ನೀಡಿದ್ದರು. ರಿಂಕಿ ನಾಪತ್ತೆಯಾದ 2 ದಿನಗಳ ಬಳಿಕ ಪಕ್ಕದ ಗ್ರಾಮದಲ್ಲಿ ಪತ್ತೆಯಾದ ಶವ ಮಗಳದ್ದು ಎಂದು ಪ್ರತಿಪಾದಿಸಿದ್ದರು. ಆದರೆ ಇತ್ತೀಚೆಗೆ ಸಂಬಂಧಿಯೊಬ್ಬರು ರಿಂಕಿ ಜಬಲ್ಪುರದಲ್ಲಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ.