ಇಂದು ರಾತ್ರಿ 12 ಗಂಟೆಯಿಂದ 50 ಮತ್ತು 100 ರೂ. ನೋಟು ರದ್ದಾಗಲಿದೆ. ಈ ವಿಷಯವನ್ನು ಪ್ರಧಾನಿಯವರು ನೇರ ಪ್ರಸಾರದಲ್ಲಿ ಘೋಷಿಸಲಿದ್ದಾರೆ ಎನ್ನುವ ಫೋಟೋ ಹಾಗೂ ವಿಡಿಯೋಗಳು ಜಾಲತಾಣಗಳಲ್ಲಿ ಹರಡಲ್ಪಟ್ಟಿವೆ.

ಕಳೆದ ವರ್ಷದ ನ.8ರಂದು ರಾತ್ರಿ, ಪ್ರಧಾನಿ ನರೇಂದ್ರ ಮೋದಿಯವರು 500 ಮತ್ತು 1000 ನೋಟು ಅಪನಗದೀಕರಣ ಮಾಡಿದ್ದರು. ಆಗ ಜನರು ತಿಂಗಳುಗಟ್ಟಲೆ ಬ್ಯಾಂಕ್‌ಗಳ ಮುಂದೆ ಸಾಲು ನಿಂತು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ ಅಂತಹುದೇ, ಆಘಾತಕಾರಿ ಸುದ್ದಿ ಎಂಬಂತೆ ಬಿಂಬಿಸುವ ಟಿವಿ ವಾಹಿನಿಯೊಂದರ, ಸ್ಕ್ರೀನ್ ಶಾಟ್ ಈಗ ಭಾರೀ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ರಾತ್ರಿ 12 ಗಂಟೆಯಿಂದ 50 ಮತ್ತು 100 ರೂ. ನೋಟು ರದ್ದಾಗಲಿದೆ. ಈ ವಿಷಯವನ್ನು ಪ್ರಧಾನಿಯವರು ನೇರ ಪ್ರಸಾರದಲ್ಲಿ ಘೋಷಿಸಲಿದ್ದಾರೆ ಎನ್ನುವ ಫೋಟೋ ಹಾಗೂ ವಿಡಿಯೋಗಳು ಜಾಲತಾಣಗಳಲ್ಲಿ ಹರಡಲ್ಪಟ್ಟಿವೆ. ಆದರೆ ಈ ಫೋಟೊಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅವು ನವೆಂಬರ್‌ನಲ್ಲಿ ನೋಟು ಅಪನಗದೀಕರಣ ಬಳಿಕ ಪ್ರಕಟವಾದ ‘ಝೀ’ ಸುದ್ದಿ ವಾಹಿನಿಯ ಸುದ್ದಿಯ ಸ್ಕ್ರೀನ್‌ಶಾಟ್‌ಗಳೆಂಬುದು ಗೊತ್ತಾಗಿದೆ.

ಟಿವಿ ಪರದೆಯಲ್ಲಿ ಪ್ರಸಾರವಾಗಿದ್ದ 500 ಮತ್ತು 1000 ನೋಟು ಅಪನಗದೀಕರಣದ ಸುದ್ದಿಯನ್ನೇ ತಿರುಚಲಾಗಿದೆ. 500, 1000 ಎಂದು ಬರೆದಿದ್ದಲ್ಲಿ, ಕೊನೆಯ ಒಂದು ಸೊನ್ನೆಯನ್ನು ಅಳಿಸಲಾಗಿದೆ. ಹೀಗಾಗಿ ಇದರಲ್ಲಿ 50, 100 ರದ್ದಾದ ಸುದ್ದಿ ಪ್ರಸಾರವಾದಂತೆ ಗೋಚರಿಸುತ್ತಿದೆ. ಇದೀಗ 200,50 ಹೊಸ ನೋಟುಗಳು ಬಿಡುಗಡೆಯಾಗುತ್ತಿರುವ ನಡುವೆ, ಇಂತಹದ್ದೊಂದು ನಕಲಿ ಫೋಟೋವನ್ನು ಹರಿಬಿಡಲಾಗಿದೆ. ಆದರೆ ಇದು ಸುಳ್ಳು ಎಂಬುದು ಪರಿಶೀಲನೆಯಿಂದ ಸಾಬೀತಾಗಿದೆ.

(ವೈರಲ್ ಚೆಕ್ ಅಂಕಣ: ಕನ್ನಡಪ್ರಭ ವಾರ್ತೆ)