ತ್ರಿಪುರ ಅನಾನಸ್ ಶೀಘ್ರದಲ್ಲೇ ವಿಶ್ವ ಮಾರುಕಟ್ಟೆಗೆ : ರಾಷ್ಟ್ರಪತಿ ಘೋಷಣೆ

news | Friday, June 8th, 2018
Suvarna Web Desk
Highlights

 ತ್ರಿಪುರಾದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಅನಾನಸ್  ನೆರೆಯ ರಾಷ್ಟ್ರಗಳಲ್ಲದೆ ವಿಶ್ವದ ಮಾರುಕಟ್ಟೆಯಲ್ಲೂ ರುಚಿ ನೋಡುವ ದಿನಗಳು ಶೀಘ್ರದಲ್ಲೇ ಬರಲಿದೆ ಎಂದು ರಾಷ್ಟ್ರಪತಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.   

ಅಗರ್ತಲಾ[ಜೂ.08]:  ಸ್ವಾದಿಷ್ಟ ರುಚಿ ಹಾಗೂ ಆರೋಗ್ಯಕ್ಕೆ ಪೂರಕವನ್ನು ಉಂಟು ಮಾಡುವ ಅನಾನಸ್ ಶೀಘ್ರದಲ್ಲೆ ವಿಶ್ವ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆಯಲಿದೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ತಿಳಿಸಿದ್ದಾರೆ. 

ಎರಡು ದಿನಗಳ ತ್ರಿಪುರ ರಾಜ್ಯ ಭೇಟಿಗೆ ಆಗಮಿಸಿದ್ದ ಅವರು ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಹೆಚ್ಚು ಬೆಳೆಯುವ ಅನಾನಸ್  ಅಂತರರಷ್ಟ್ರೀಯ ವಾಣಿಜ್ಯ ವಹಿವಾಟಿಗೆ ಸಂಪರ್ಕ ಕಲ್ಪಿಸಲು ಹೆಚ್ಚು ನೆರವಾಗುತ್ತದೆ ಎಂದು ತಿಳಿಸಿದರು.

ನೆರೆಯ ಬಾಂಗ್ಲಾದೇಶದಲ್ಲಿ ಅನಾನಸ್ ಉತ್ತಮ ವಹಿವಾಟಿನ ವಾಣಿಜ್ಯ ಬೆಳೆಗಳಲ್ಲಿ ಒಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಬಾಂಗ್ಲಾದೇಶ ಮಾತ್ರವಲ್ಲದೆ ವಿಶ್ವದ ಇತರ ದೇಶಗಳು ನಮ್ಮದೇಶದ ಹಣ್ಣಿನ ರುಚಿ ನೋಡುವ ದಿನಗಳು ಶೀಘ್ರದಲ್ಲೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.   

ಎರಡು ದಿನಗಳ ಭೇಟಿಯಲ್ಲಿ ತ್ರಿಪುರ ಸುಂದರಿ ದೇವಾಸ್ಥಾನ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿದರು. ತ್ರಿಪುರ ಸುಂದರಿ ದೇಗುಲವನ್ನು  ದೇಶದ ಪ್ರಮುಖ 51 ಶಕ್ತಿಪೀಠಗಳಲ್ಲಿ ಪ್ರಮುಖವಾದುದೆಂದು ಬಣ್ಣಿಸಿದರು. ತ್ರಿಪುರ ರಾಜ್ಯ ಕೆಲವೇ ತಿಂಗಳಲ್ಲಿ ದುಬೈ ರಾಜ್ಯಕ್ಕೆ ಟನ್'ಗಟ್ಟಲೆ ಅನಾನಸ್ ಹಣ್ಣನ್ನು ರಫ್ತು ಮಾಡಿದೆ.

Comments 0
Add Comment

    Related Posts

    President Ramnath Kovind Inaguarated Mahamastakabhisheka today

    video | Wednesday, February 7th, 2018
    Chethan Kumar