ನನ್ನ 10 ವರ್ಷಗಳ ಶಾಸಕ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಚರ್ಚೆಯಾದ ವಿಧೇಯಕ ನಾನು ನೋಡಿಲ್ಲ. ಇಷ್ಟೆಲ್ಲಾ ವಿರೋಧದ ನಡುವೆಯೂ ಬಿಲ್ ತರಲು ರಮೇಶ್ ಕುಮಾರ್ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರನ್ನು ಕಂಡರೆ ನನಗೆ ಪ್ರೀತಿ ಹಾಗೂ ಹೊಟ್ಟೆಕಿಚ್ಚು ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ವಿಧಾನಪರಿಷತ್(ನ.23): ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ತಂದಿದ್ದಕ್ಕೆ ಕೋಟಾ ಶ್ರೀನಿವಾಸ್ ಪೂಜಾರಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನ 10 ವರ್ಷಗಳ ಶಾಸಕ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಚರ್ಚೆಯಾದ ವಿಧೇಯಕ ನಾನು ನೋಡಿಲ್ಲ. ಇಷ್ಟೆಲ್ಲಾ ವಿರೋಧದ ನಡುವೆಯೂ ಬಿಲ್ ತರಲು ರಮೇಶ್ ಕುಮಾರ್ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರನ್ನು ಕಂಡರೆ ನನಗೆ ಪ್ರೀತಿ ಹಾಗೂ ಹೊಟ್ಟೆಕಿಚ್ಚು ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಒಮ್ಮೆ ವಿಧೇಯಕ ಜಂಟಿ ಸದನ ಸಮಿತಿಗೆ ಹೋದರೆ ಸದ್ಯಕ್ಕೆ ವಾಪಾಸ್ ಬರುವುದಿಲ್ಲ. ಆದರೆ ಈ ವಿಧೇಯಕ ಜಂಟಿ ಸದನ ಸಮಿತಿಗೆ ಹೋಗಿ ಇಷ್ಟು ಬೇಗ ವಾಪಾಸ್ ಬರುತ್ತದೆ ಎಂದುಕೊಂಡಿರಲಿಲ್ಲ. ಈ ವಿಧೇಯಕ ಜಾರಿಯಾಗಲು ಆರೋಗ್ಯ ಸಚಿವರು ಸಾಕಷ್ಟು ಶ್ರಮಿಸಿದ್ದಾರೆ ಎಂದು ಪೂಜಾರಿ ಹೇಳಿದ್ದಾರೆ.

ವಿರೋಧ ಪಕ್ಷದವರು ಏನೇ ಆರೋಪ ಮಾಡಿದರೂ, ಮಾತನಾಡಿದರೂ ನಮ್ಮ ಮಾತುಗಳು ನಮಗೇ ಮರೆತುಹೋಗುವಷ್ಟು ಚೆನ್ನಾಗಿ ಮಾತನಾಡುವ ರಮೇಶ್ ಕುಮಾರ್ ಉತ್ತಮ ಸಂಸದೀಯ ಪಟು. ಹೀಗಾಗಿ ಅವರನ್ನು ಕಂಡರೆ ನನಗೆ ಹೊಟ್ಟೆಕಿಚ್ಚು ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ.