ಶ್ರೀರಾಮನನ್ನು ಮನೆಯಲ್ಲಿ ಪೂಜಿಸ್ತಾರೆ; ಹೊರಗಡೆ ಅದೇ ರಾಮನ ಹೆಸರಲ್ಲಿ ಕೊಲೆ ಮಾಡ್ತಾರೆ: ಶಾಸಕನಿಂದ ವಿವಾದದ ಕಿಡಿ

First Published 29, Jan 2018, 8:59 AM IST
Koppala Minister Controversial Statement become Viral in Social Media
Highlights

ಗಂಗಾವತಿ ಶಾಸಕ ಇಕ್ಬಾಲ್​ ಅನ್ಸಾರಿ, ಶ್ರೀರಾಮನನ್ನು ಮನೆಯಲ್ಲಿ ಪೂಜೆ ಮಾಡುತ್ತಾರೆ. ಹೊರಗಡೆ ಅದೇ ರಾಮನ ಹೆಸರಿನಲ್ಲಿ ಕೊಲೆ ಮಾಡುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರು (ಜ.29): ಗಂಗಾವತಿ ಶಾಸಕ ಇಕ್ಬಾಲ್​ ಅನ್ಸಾರಿ, ಶ್ರೀರಾಮನನ್ನು ಮನೆಯಲ್ಲಿ ಪೂಜೆ ಮಾಡುತ್ತಾರೆ. ಹೊರಗಡೆ ಅದೇ ರಾಮನ ಹೆಸರಿನಲ್ಲಿ ಕೊಲೆ ಮಾಡುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೊಪ್ಪಳದಲ್ಲಿ ನಡೆದ ಮುಸ್ಲಿಂ ಚಿಂತಕರ ಚಾವಡಿ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿದ ಶಾಸಕ,  ಕೆಲವರು ಮನೆಯಲ್ಲಿ ಶ್ರೀರಾಮನ ಪೂಜೆ ಮಾಡ್ತಾರೆ. ಹೊರಗಡೆ ಬಂದು ಶ್ರೀರಾಮನ ಹೆಸರಲ್ಲಿ,ಕೊಲೆ,ಲೂಟಿ,ದರೋಡೆ ಮಾಡ್ತಾರೆ. ಶ್ರೀರಾಮನ ಹೆಸರಲ್ಲಿ ವಿಷಬೀಜ ಬಿತ್ತನೆ ಮಾಡ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಮ್ಮ ಯುವಕರನ್ನು ಜೈಲಿಗೆ ಕಳುಹಿಸಬೇಕೆಂದು ಕುಮ್ಮಕ್ಕು ಕೊಡುತ್ತಿದ್ದಾರೆ. ಇದು ಮೋದಿ ಬಂದ ಮೇಲೆ ಹೆಚ್ಚಾಗಿದೆ. ಇಂತವರಿಗೆ ಸಂವಿಧಾನ, ಕಾನೂನು ಇಲ್ಲ. ಅಷ್ಟೇ ಅಲ್ಲ ನಮಗೆ ಇರುವ ದೇಶಾಭಿಮಾನ ಅವರಿಗೆ ಇಲ್ಲ ಎಂದಿದ್ದಾರೆ. ಇನ್ನೂ ಅವರು ಪೊಲೀಸರಿಗೆ ಲೇ ಅಂತಾರೆ, ಮುಸ್ಲಿಂ ಸಮುದಾಯ ರೀ ಎಂದು ಮಾತಾಡ್ತೀವಿ ಎಂದು ಪರೋಕ್ಷವಾಗಿ ಹಿಂದೂ ಕೋಮಿನವರಿಗೆ ಹೇಳಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಒಂದು ಕೋಮಿನ ಕೆಂಗಣ್ಣಿಗೆ ಗುರಿಯಾಗಿದೆ.

loader