ಮುಸ್ಲಿಂ ಸಮುದಾಯದ ಧಾರ್ಮಿಕ ಸ್ಥಳದಲ್ಲಿ ಹಂದಿ ಚಿತ್ರ

First Published 21, Feb 2018, 8:43 PM IST
Koppala Crime News
Highlights

ಧಾರ್ಮಿಕ ಸ್ಥಳದಲ್ಲಿ ಹಂದಿ ಚಿತ್ರ

ಕೊಪ್ಪಳ(ಫೆ.21): ಫೇಸ್'ಬುಕ್'ನಲ್ಲಿ ಮುಸ್ಲಿಂ ಸಮುದಾಯದ ಧಾರ್ಮಿಕ ಸ್ಥಳದ ಕಟ್ಟಡದ ಮೇಲೆ ಹಂದಿ ಚಿತ್ರವಿರುವ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಕೊಪ್ಪಳದ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಕೊಳ್ಳಲಾಗಿದೆ.

ಮದನ ಬರವರ, ಭಜರಂಗಿ ರಾಮನಿವಾಸ, ಗೋಪಾಲ ಖರವಾ ವಿರುದ್ಧ ದೂರು ದಾಖಲಾಗಿದೆ. ಮದನ ಬರವರ ತನ್ನ ಫೇಸ್‍ಬುಕ್‍ನಲ್ಲಿ ಕಾಬಾ ಮೇಲೆ ಹಂದಿಯ ಚಿತ್ರ ಹಾಕಿದ್ದ ಆರೋಪವಿದೆ. ರಾಜಸ್ಥಾನ ಮೂಲದವರಾಗಿರುವ ಇವರು ಕುಷ್ಟಗಿಯಲ್ಲಿ ನಿವಾಸಿಗಳಾಗಿದ್ದಾರೆ.

loader