ಕೋಲ್ಕತ್ತಾ [ ಜ. 16] ಯುವತಿಯರ ಕನ್ಯತ್ವದ ಬಗ್ಗೆ ಅಶ್ಲೀಲವಾಗಿ ಪಶ್ಚಿಮ ಬಂಗಾಳದ ಪ್ರೊಫೆಸರ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡು ನಂತರ ಡಿಲೀಟ್ ಮಾಡಿದ್ದರು.  ಜಾಧವ್‍ಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಕನಕ್ ಸರ್ಕಾರ್  ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.

ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ? ಕನ್ಯತ್ವ ಸಹ ಹಾಗೆ ಎಂದು ಗಂಡುಮಕ್ಕಳ ಉದ್ದೇಶಿಸಿ ಬರೆದುಕೊಂಡಿದ್ದರು. ಇದೇ  ಕಾರಣ ಅವರನ್ನು ಕೆಲಸ ಕಳೆದುಕೊಳ್ಳುವಂತೆ ಮಾಡಿದೆ. 

ಕನ್ಯತ್ವ ಅನ್ನೋದು ಸೀಲ್ಡ್ ಬಾಟಲ್‌!

ಸೋಶಿಯಲ್ ಮೀಡಿಯಾದಲ್ಲಿ ಪ್ರೋಫೆಸರ್ ವಿರುದ್ಧ ನಿರಂತರವಾಗಿ ಪ್ರತಿಕ್ರಿಯೆಗಳು ಬರುತ್ತಲೇ ಇದ್ದವು. ಇದೆಲ್ಲವನ್ನು ಗಮನಿಸಿದ ವಿಶ್ವವಿದ್ಯಾನಿಲಯದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಓಂಪ್ರಕಾಶ್ ಮೀಶ್ರಾ ವಿವಾದಿತ ಕಮೆಂಟ್ ಹಾಕಿದ್ದ ಪ್ರೊಫೆಸರ್‌ಗೆ ಗೇಟ್ ಪಾಸ್ ನೀಡಿದ್ದಾರೆ.