ಅಡುಗೆ ಮಾಡುವುದು ಮರೆತು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದ ಪತ್ನಿ ಕೊಲೆಗೈದ ಪತಿ

Kolkata man murders social media addict wife
Highlights

ಅಡುಗೆ ಮಾಡದೇ ಸಾಮಾಜಿಕ ಜಾಲತಾಣದಲ್ಲೇ ಮುಳುಗಿ ಅಡುಗೆ ಮಾಡುವುದನ್ನೇ ಮರೆತ ಪತ್ನಿಯನ್ನು ಪತಿ ಹತ್ಯೆ ಮಾಡಿದ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ನವದೆಹಲಿ : ಅಡುಗೆ ಮಾಡದೇ ಸಾಮಾಜಿಕ ಜಾಲತಾಣದಲ್ಲೇ ಮುಳುಗಿ ಅಡುಗೆ ಮಾಡುವುದನ್ನೇ ಮರೆತ ಪತ್ನಿಯನ್ನು ಪತಿ ಹತ್ಯೆ ಮಾಡಿದ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಳು. ಇದರಿಂದ ಯಾರೊಂದಿಗೋ ಆಕೆ ಅಕ್ರಮ ಸಂಬಂಧ ಹೊಂದಿರಬಹುದೆಂಬ ಶಂಕೆಯಿಂದ ಹತ್ಯೆ ಮಾಡಿದ್ದಾಗಿ ಪೊಲೀಸರ ಮುಂದೆ ಪತಿ ಸುರಜಿತ್ ಪಾಲ್ ಬಾಯಿಬಿಟ್ಟಿದ್ದಾನೆ.

ಜನವರಿ 24 ರಂದು ಗಂಡ ಕೆಲಸ ಮುಗಿಸಿ ಮನೆಗೆ ಬಂದಾಗ ತನ್ನ ಮೊಬೈಲ್ ಫೋನ್ ಹಿಡಿದುಕೊಂಡು ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಳು. ಅಲ್ಲದೇ ಆಕೆ ಅಡುಗೆ ಮಾಡುವುದನ್ನೂ ಕೂಡ ಮರೆತಿದ್ದಳು.

ಇದರಿಂದ ಕೋಪಗೊಂಡ ಪತಿ ಸುರಜಿತ್ ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ.

loader