ಹೋಟೆಲ್’ಗೆ ಸತ್ತ ನಾಯಿ - ಮೀನಿನ ಮಾಂಸ

Kolkata Dog meat fear sale of non veg food
Highlights

 ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ಮಾಂಸಾಹಾರಿ ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳಲ್ಲಿ ಚಿಕನ್, ಮಟನ್ ಮತ್ತು ಹಂದಿಗಳಿಂದ ತಯಾರಿಸಲಾದ ಆಹಾರಗಳಲ್ಲಿ ಶ್ವಾನ ಸೇರಿದಂತೆ ಇತರ ಸತ್ತ ಪ್ರಾಣಿಗಳ ಮಾಂಸವೂ ಕಲಬೆರಕೆಯಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. 

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ಮಾಂಸಾಹಾರಿ ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳಲ್ಲಿ ಚಿಕನ್, ಮಟನ್ ಮತ್ತು ಹಂದಿಗಳಿಂದ ತಯಾರಿಸಲಾದ ಆಹಾರಗಳಲ್ಲಿ ಶ್ವಾನ ಸೇರಿದಂತೆ ಇತರ ಸತ್ತ ಪ್ರಾಣಿಗಳ ಮಾಂಸವೂ ಕಲಬೆರಕೆಯಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. 
ಈ ಹಿನ್ನೆಲೆಯಲ್ಲಿ ಈಶಾನ್ಯ ಭಾರತದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘಟನೆ(ಎಚ್ ಆರ್‌ಎಇಐ) ತನ್ನ ಸದಸ್ಯರುಗಳಿಗೆ ನೋಂದಾಯಿತ ಪೂರೈಕೆದಾರರಿಂದ ಮಾತ್ರವೇ ಮಾಂಸವನ್ನು ಖರೀದಿಸುವಂತೆ ಸಲಹೆ ನೀಡಿದೆ. 
ಕೋಲ್ಕತ್ತಾದ  ಬಳಿಯಿರುವ ತ್ಯಾಜ್ಯ ಘಟಕಗಳಲ್ಲಿರುವ ಸತ್ತ ಪ್ರಾಣಿಗಳನ್ನು ನಗರದತ್ತ ಸಾಗಿಸಲಾಗುತ್ತಿದ್ದು, ಅದನ್ನು ಇತರ ಮಾಂಸದ ಜತೆ ಬೆರಕೆ ಮಾಡಲಾಗುತ್ತಿದೆ ಎಂಬ ಅನುಮಾನಗಳು ಹರಿದಾಡುತ್ತಿವೆ. 

loader