ಬೆಂಗಳೂರು [ಆ.01]: ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಕೋಳಿ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. 

ಯಾದಗಿರಿಯಲ್ಲಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಹನುಮಂತ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಕೋಲಿ ಸಮಾಜ 60 ಲಕ್ಷ ಜನಸಂಖ್ಯೆ ಹೊಂದಿದ್ದು, ಹೈದ್ರಾಬಾದ್  ಕರ್ನಾಟಕದಲ್ಲಿ ನಮ್ಮ ಸಮುದಾಯ ಹೆಚ್ಚಿನ ಜನರನ್ನು ಹೊಂದಿದ್ದು, ನಮ್ಮ ಸಮುದಾಯದ ನಾಯಕ ಗುರುಮಠಕಲ್ ಕ್ಷೇತ್ರದಿಂದ ಹಲವು ಬಾರಿ ಗೆಲುವು ಸಾಧಿಸಿದ್ದ ಮಾಜಿ ಸಚಿವ ಚಿಂಚನೂಸರ್ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.  

ಇಬ್ಬರಲ್ಲಿ ಯಾರಿಗೆ ಒಲಿಯುತ್ತೆ BSY ಸಂಪುಟದಲ್ಲಿ DCM ಸ್ಥಾನ?

ಎಲ್ಲ ವರ್ಗದ ಜನರನ್ನು ಮುನ್ನಡೆಸುವ ಗುಣವನ್ನು ಹೊಂದಿರುವ ಬಾಬುರಾವ್ ಅವರಿಗೆ ಈ ಬಾರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಅನರ್ಹ ಶಾಸಕರಿಗೆ BSY ಸಂಪುಟದಲ್ಲಿ ಸಚಿವ ಸ್ಥಾನ ಫಿಕ್ಸ್

ಸಂಸದ ಉಮೇಶ್ ಜಾಧವ್ ಅವರ ಗೆಲುವಿನಲ್ಲಿ ಬಾಬುರಾವ್ ಚಿಂಚನಸೂರ್ ಮಹತ್ತರ ಪಾತ್ರ ನಿರ್ವಹಿಸಿದ್ದರು. ಆದರೆ ಕಳೆದ ಬಾರಿ ಗುರುಮಠಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ನಿಟ್ಟಿನಲ್ಲಿ ಚಿಂಚನಸೂರ್ ಅವರಿಗೆ ಪರಿಷತ್ ಸದಸ್ಯರನ್ನಾಗಿಸಿ ಸಚಿವ ಸ್ಥಾನ ನೀಡಬೇಕೆಂದು ಕೂಲಿ ಸಮಾಜದ ಜಿಲ್ಲಾಧ್ಯಕ್ಷ ಹನುಮಂತರೆಡ್ಡಿ ಹೇಳಿದರು.