ಕೋಲಾರ ಚುನಾವಣಾ ಕಣ: ರಮೇಶ್ ಕುಮಾರ್’ಗೆ ಕೊನೆ ಚುನಾವಣೆ; ವರ್ತೂರಿಗೆ ಹ್ಯಾಟ್ರಿಕ್ ಗೆಲುವು?

Kolara  Constituency Assembly Election 2018
Highlights

ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರನ್ನು ಕೊಡುಗೆಯಾಗಿ ನೀಡಿದ ಜಿಲ್ಲೆ ಇದು. ಚಿನ್ನದ ಗಣಿ ಹೊಂದಿರುವ ಕೋಲಾರ ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಿಂದಿನಿಂದಲೂ ಸಮಬಲದ ಹೋರಾಟವಿದೆ. ಬಿಜೆಪಿಯ ಅಬ್ಬರ ಇಲ್ಲಿ ತೀರಾ ಕಡಿಮೆ. ಇಪ್ಪತ್ತು ವರ್ಷಗಳ ಹಿಂದೆ ಜನತಾ ಪರಿವಾರವನ್ನು ಸಿ. ಬೈರೇಗೌಡರು, ಕಾಂಗ್ರೆಸ್ ಪಕ್ಷವನ್ನು ವಿ. ಮುನಿಯಪ್ಪ ಮತ್ತಿತರರು ಮುನ್ನಡೆಸುತ್ತಿದ್ದರು. ಎಡಪಕ್ಷಗಳೂ ಗಣನೀಯ ಪ್ರಭಾವ ಹೊಂದಿದ್ದವು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ತಂತ್ರಗಾರಿಕೆ, ಹಣ ಮತ್ತು ಜಾತಿ ಲೆಕ್ಕಾಚಾರ ಪ್ರಾಮುಖ್ಯತೆ ಪಡೆದುಕೊಂಡಿವೆ. ಹೀಗಾಗಿ ಜಿಲ್ಲೆಯ ರಾಜಕೀಯವನ್ನು ಇಡಿಯಾಗಿ  ನೋಡುವ ಕಾಲ ಈಗಿಲ್ಲ.

ಕೋಲಾರ (ಫೆ.21): ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರನ್ನು ಕೊಡುಗೆಯಾಗಿ ನೀಡಿದ ಜಿಲ್ಲೆ ಇದು. ಚಿನ್ನದ ಗಣಿ ಹೊಂದಿರುವ ಕೋಲಾರ ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಿಂದಿನಿಂದಲೂ ಸಮಬಲದ ಹೋರಾಟವಿದೆ. ಬಿಜೆಪಿಯ ಅಬ್ಬರ ಇಲ್ಲಿ ತೀರಾ ಕಡಿಮೆ. ಇಪ್ಪತ್ತು ವರ್ಷಗಳ ಹಿಂದೆ ಜನತಾ ಪರಿವಾರವನ್ನು ಸಿ. ಬೈರೇಗೌಡರು, ಕಾಂಗ್ರೆಸ್ ಪಕ್ಷವನ್ನು ವಿ. ಮುನಿಯಪ್ಪ ಮತ್ತಿತರರು ಮುನ್ನಡೆಸುತ್ತಿದ್ದರು. ಎಡಪಕ್ಷಗಳೂ ಗಣನೀಯ ಪ್ರಭಾವ ಹೊಂದಿದ್ದವು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ತಂತ್ರಗಾರಿಕೆ, ಹಣ ಮತ್ತು ಜಾತಿ ಲೆಕ್ಕಾಚಾರ ಪ್ರಾಮುಖ್ಯತೆ ಪಡೆದುಕೊಂಡಿವೆ. ಹೀಗಾಗಿ ಜಿಲ್ಲೆಯ ರಾಜಕೀಯವನ್ನು ಇಡಿಯಾಗಿ  ನೋಡುವ ಕಾಲ ಈಗಿಲ್ಲ.
ಕೋಲಾರ ಜಿಲ್ಲೆಯಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳಿವೆ. ಎರಡು ಕಾಂಗ್ರೆಸ್, ಎರಡು ಪಕ್ಷೇತರರು, ಒಂದು ಜಾತ್ಯತೀತ ಜನತಾ ದಳ (ಜೆಡಿಎಸ್) ಹಾಗೂ ಒಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿಡಿತದಲ್ಲಿವೆ. ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರಗಳಾಗಿವೆ. ಕಾಂಗ್ರೆಸ್ ಈ ಬಾರಿ  ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಳ್ಳುವತ್ತ ಪ್ರಯತ್ನ ನಡೆಸಿದೆ. ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ  ಕೊತ್ತೂರು ಮಂಜುನಾಥ್ ಅವರನ್ನು ಸೆಳೆದು ಕೊಂಡಿದೆ. ವರ್ತೂರು ಪ್ರಕಾಶ್ ಅವರಿಗೆ ಒಂದು ಗುಂಪಿನಿಂದ ತೀವ್ರ ವಿರೋಧ ಉಂಟಾಗಿದ್ದರಿಂದ ಕಾಂಗ್ರೆಸ್ ಸೇರ್ಪಡೆ ಆಗಲಿಲ್ಲ.  
ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾ ದಳವು ಬಲಿಷ್ಠವಾಗಿ ದ್ದರೂ ಸಂಘಟನೆಯ ಕೊರತೆ ಇದೆ. ಮುಖಂಡರ ಒಳಜಗಳದಿಂದಾಗಿ ಚುನಾ ವಣೆಯನ್ನು ಎದುರಿಸುವ ನಾಯಕರಿಲ್ಲದಂತಾಗಿದೆ. ಒಂದು ಕಾಲಕ್ಕೆ ಮಣ್ಣಿನ ಮಕ್ಕಳ ಪಕ್ಷವೆನಿಸಿಕೊಂಡಿದ್ದ ಜೆಡಿಎಸ್‌ನಲ್ಲಿ ಈಗ ರಿಯಲ್ ಎಸ್ಟೇಟ್ ಅಸಾಮಿಗಳಿಗೇ ಹೆಚ್ಚು ಮಣೆ ಹಾಕಲಾಗುತ್ತಿದೆ ಎಂಬುದು ಕಾರ್ಯಕರ್ತರ ದೂರು. ಮಾಲೂರು ವಿಧಾನಸಭಾ ಕ್ಷೇತ್ರದ ಮೂಲಕ ಜಿಲ್ಲೆಗೆ ಎಂಟ್ರಿ ಕೊಟ್ಟ ಭಾರತೀಯ ಜನತಾ ಪಕ್ಷವು ಬಂಗಾರಪೇಟೆ, ಕೆಜಿಎಫ್‌ಗೂ ತನ್ನ ಬಲವನ್ನು  ವಿಸ್ತರಿಸಿಕೊಂಡಿದೆ. ಬಿಜೆಪಿಯನ್ನು ಜಿಲ್ಲಾ ಮಟ್ಟದಲ್ಲಿ ಬೆಳೆಸುವ ಪ್ರಬಲ ನಾಯಕರು ಕಾಣುತ್ತಿಲ್ಲ. ವರ್ತೂರು ಪ್ರಕಾಶ್ ಅವರ ನಮ್ಮ ಕಾಂಗ್ರೆಸ್ ಪಕ್ಷ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಬ್ಲ್ಯಾಕ್‌ಮೇಲ್ ಮಾಡುವುದಕ್ಕಾಗಿಯೇ ಹುಟ್ಟಿಕೊಂಡಂತಿದೆ. ಕುರುಬ ಸಮುದಾಯದ ಮತಗಳನ್ನು ಸೆಳೆದು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ತಂತ್ರವನ್ನು ‘ನಮ್ಮ ಕಾಂಗ್ರೆಸ್’ ಹೊಂದಿದೆ  ಎನ್ನಲಾಗುತ್ತಿದೆ. 

ಶ್ರೀನಿವಾಸಪುರ ಒಟ್ಟು ಮತಗಳು  2,01,779

ಇದು ರಮೇಶ್ ಕುಮಾರ್ ಕೊನೆ ಚುನಾವಣೆ 

ರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಈ ಕ್ಷೇತ್ರ ಪ್ರತಿನಿಧಿಸುತ್ತಿ ದ್ದಾರೆ. ಈಗ ಮತ್ತೆ ಸ್ಪರ್ಧಿಸಲಿದ್ದಾರೆ. ಅವರಿಗೆ ಜೆಡಿಎಸ್‌ನ ಜಿ.ಕೆ. ವೆಂಕಟಶಿವಾ ರೆಡ್ಡಿ ಸಾಂಪ್ರದಾಯಿಕ ಎದುರಾಳಿ. ಅವರೂ ಕಣಕ್ಕಿಳಿಯುತ್ತಿದ್ದಾರೆ. ಇಲ್ಲಿ ಪಕ್ಷ, ಚಿಹ್ನೆ ನಗಣ್ಯ. ಒಂದು ಅವಧಿಗೆ ರಮೇಶ್ ಕುಮಾರ್, ಮತ್ತೊಂದು ಅವಧಿಗೆ ವೆಂಕಟಶಿವಾರೆಡ್ಡಿ ಗೆಲ್ಲುತ್ತಾರೆ. ಈ ಬಾರಿ ಇದಕ್ಕೆ ಬ್ರೇಕ್ ಬೀಳುತ್ತಾ ಎಂಬ ಕುತೂಹಲವಿದೆ. ಸಚಿವರಾದ ಮೇಲೆ ಮಾಡಿರುವ ಅಭಿವೃದ್ಧಿ ಕೆಲಸಗಳು, ಕೆ.ಸಿ. ವ್ಯಾಲಿ, ಎತ್ತಿನಹೊಳೆ ಯೋಜನೆ ಶ್ರೀರಕ್ಷೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರಮೇಶ್ ಇದ್ದಾರೆ. ಅದೂ ಅಲ್ಲದೆ ಅವರು ಕೊನೆಯ ಚುನಾವಣೆ ಎನ್ನುತ್ತಿದ್ದಾರೆ. ಬಿಜೆಪಿಗೆ ಇಲ್ಲಿ ಗಟ್ಟಿ ನೆಲೆ ಇಲ್ಲ. ಹೀಗಾಗಿ ಆ ಪಕ್ಷದಿಂದ ಆಕಾಂಕ್ಷಿಗಳೂ ಇಲ್ಲ. ತಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ರಮೇಶ್ ಕುಮಾರ್ ಅವರನ್ನು ಸೋಲಿಸುವುದಾಗಿ ವರ್ತೂರು ಪ್ರಕಾಶ್ ಬೆದರಿಕೆ ಹಾಕಿದ್ದಾರೆ.

ಕೋಲಾರ ಒಟ್ಟು ಮತಗಳು 2,24,455 

ವರ್ತೂರಿಗೆ ಹ್ಯಾಟ್ರಿಕ್ ನಿರೀಕ್ಷೆ  

ಕ್ಷೇತ್ರದಲ್ಲಿ  ದಲಿತರು, ಒಕ್ಕಲಿಗರು, ಮುಸ್ಲಿಮರು, ಕುರುಬರು ಗಣನೀಯವಾಗಿದ್ದಾರೆ. ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಇಲ್ಲಿಂದ ಎರಡು ಬಾರಿ ಆಯ್ಕೆಯಾಗಿದ್ದಾರೆ. ಈ ಸಲ ಸ್ವಂತ ಪಕ್ಷ ‘ನಮ್ಮ ಕಾಂಗ್ರೆಸ್’ನಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಬಾರಿ  ಅವರಿಗೆ ವಿರೋಧದ ಅಲೆಯೂ ಕಂಡು ಬರುತ್ತಿದೆ ಎಂಬ ಮಾತಿದೆ. ಜೆಡಿಎಸ್  ಅಥವಾ ಕಾಂಗ್ರೆಸ್ ಎನ್ನದೇ ಇಲ್ಲಿನ ಒಕ್ಕಲಿಗರು ತಮ್ಮ ಸಮುದಾಯದ  ಅಭ್ಯರ್ಥಿ ಬೆಂಬಲಕ್ಕೆ ನಿಲ್ಲುತ್ತಾ  ಬಂದಿದ್ದಾರೆ. ಮಾಜಿ ಸಚಿವ ಕೆ. ಶ್ರೀನಿವಾಸಗೌಡ
ಅವರು ಜೆಡಿಎಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿ. ಕಾಂಗ್ರೆಸ್ಸಿಂದ ಸ್ಪರ್ಧಿಸುತ್ತಿದ್ದ ಪ್ರಭಾವಿ ಮುಖಂಡ ನಸೀರ್ ಅಹಮದ್ ಕಣಕ್ಕಿಳಿಯುವುದಿಲ್ಲ ಎಂದಿದ್ದಾರೆ. ಹೀಗಾಗಿ ಅನಿಲ್ ಕುಮಾರ್ ಸುದರ್ಶನ್, ನಿವೃತ್ತ ಜಿಲ್ಲಾಧಿಕಾರಿ ಜಮೀರ್ ಪಾಷ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಓಂ ಶಕ್ತಿಚಲಪತಿ ಮತ್ತು ನಾಚಹಳ್ಳಿ ವೆಂಕಟರೆಡ್ಡಿ  ಪ್ರಮುಖ ಆಕಾಂಕ್ಷಿಗಳು. 

loader